Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಎಫೆ 2

ಮರಣದಿಂದ ಜೀವಕ್ಕೆ

1

ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ. ಪೂರ್ವದಲ್ಲಿ 2ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, 3ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, 4ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. 5ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು. ಆದರೆ 6ಕರುಣಾನಿಧಿಯಾಗಿರುವ ದೇವರು 7ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, ಅಪರಾಧಗಳ ದೆಸೆಯಿಂದ 8ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. 9ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ 10ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, 11ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. 12ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 13ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, 14ಅದು ದೇವರ ದಾನವೇ. 15ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, 16ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 17ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, 18ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ 19ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಕ್ರಿಸ್ತನಲ್ಲಿ ಒಂದೇ ಜನಾಂಗ

ಕೊಲೊ 1:21-29

ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ 20ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ. ಅಂದು 21ನೀವು ಕ್ರಿಸ್ತನಿಂದ ದೂರವಿದವರೂ, 22ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, 23ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು 24ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಈಗಲಾದರೋ, 25ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ 26ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ. 27ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ 28ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು 29ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ. ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ 30ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ. ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ 31ಇಲ್ಲವಾಗಿಸಿ, 32ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ. ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. ಇದರಿಂದ 33ಆತನ ಮೂಲಕ ಉಭಯತ್ರರು 34ಒಂದೇ ಆತ್ಮನಲ್ಲಿ 35ತಂದೆಯ ಬಳಿಗೆ 36ಪ್ರವೇಶಿಸಲು ಮಾರ್ಗವಾಯಿತು. ಹೀಗಿರಲಾಗಿ ನೀವು ಇನ್ನು ಮೇಲೆ 37ಪರದೇಶದವರೂ ಅನ್ಯರೂ ಆಗಿರದೇ 38ದೇವಜನರೊಂದಿಗೆ ಒಂದೇ ಸಂಸ್ಥಾನದವರೂ 39ದೇವರ ಮನೆಯವರೂ ಆಗಿದ್ದೀರಿ. 40ಅಪೊಸ್ತಲರೂ 41ಪ್ರವಾದಿಗಳೂ ಎಂಬ 42ಅಡಿಪಾಯದ ಮೇಲೆ 43ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. 44ಯೇಸು ಕ್ರಿಸ್ತನೇ 45ಮುಖ್ಯವಾದ ಮೂಲೆಗಲ್ಲು. 46ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ 47ಪರಿಶುದ್ಧ ದೇವಾಲಯವಾಗುತ್ತದೆ. 48ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ 49ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

Source notes (49)
  1. Footnote ಕೊಲೊ 1:21; 2:13:
  2. Footnote ಎಫೆ 4:17,22; 5:8; ಕೊಲೊ 3:7; 1 ಕೊರಿ 6:7,8:
  3. Footnote ಎಫೆ 6:12; ಯೋಹಾ 12:13:
  4. Footnote ಗಲಾ 5:16:
  5. Footnote ಕೀರ್ತ 51:5; ರೋಮಾ. 5:12. 2 ಪೇತ್ರ 2:14:
  6. Footnote ಎಫೆ 2:7; ತೀತ. 3:5:
  7. Footnote ಯೋಹಾ 3 16:
  8. Footnote ಕೊಲೊ 2:12,13; ಯೋಹಾ 14:19:
  9. Footnote ಎಫೆ 1 8; ಅ. ಕೃ. 15:11:
  10. Footnote ತೀತ. 3:4:
  11. Footnote ಎಫೆ 1:21:
  12. Footnote 1 ಪೇತ್ರ. 1:5; ರೋಮಾ. 4:16:
  13. Footnote 2 ಕೊರಿ 3:5:
  14. Footnote ಯೋಹಾ 4:10:
  15. Footnote 2 ತಿಮೊ. 1:9; ತೀತ. 3:5; ರೋಮಾ. 3:20,28:
  16. Footnote 1 ಕೊರಿ 1:29:
  17. Footnote ಕೀರ್ತ 100. 3; ಯೆಶಾ 64:8:
  18. Footnote ಎಫೆ 1:4:
  19. Footnote ಎಫೆ 4:24; ತೀತ. 2:14:
  20. Footnote ರೋಮಾ. 2:28,29; ಕೊಲೊ 2:11,13:
  21. Footnote ಎಫೆ 5:8:
  22. Footnote ಕೊಲೊ 1:21; ಗಲಾ. 2:15:
  23. Footnote ರೋಮಾ. 9:4:
  24. Footnote 1 ಥೆಸ. 4:13:
  25. Footnote ಎಫೆ 2:17; ಅ. ಕೃ. 2:39:
  26. Footnote ಕೊಲೊ 1:20:
  27. Footnote ಗಲಾ. 3:28:
  28. Footnote ಮೀಕ. 5:5; ಕೊಲೊ 3:15:
  29. Footnote ಕೊಲೊ 1:21,22:
  30. Footnote ರೋಮಾ. 6:4:
  31. Footnote ಅಥವಾ, ಪರಿಹರಿಸಿ.
  32. Footnote ಕೊಲೊ 1:20-22:
  33. Footnote ಯೋಹಾ 14:6
  34. Footnote ಎಫೆ 4:4; 1 ಕೊರಿ 12:13 ಯೋಹಾ 4:23:
  35. Footnote ಎಫೆ 3:12; ರೋಮಾ. 5:2; ಯೋಹಾ 10:7,9
  36. Footnote ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು.
  37. Footnote ಎಫೆ 2:12; ಇಬ್ರಿ. 11:13, 13:14:
  38. Footnote ಫಿಲಿ. 3:20; ಇಬ್ರಿ. 12:22,23:
  39. Footnote ಗಲಾ. 6:10
  40. Footnote ಮತ್ತಾ 16:18; ಪ್ರಕ 21:14:
  41. Footnote ಎಫೆ 3:5; 4:11:
  42. Footnote ಅಥವಾ ಹಾಕಿದ.
  43. Footnote 1 ಕೊರಿ 3:9:
  44. Footnote 1 ಕೊರಿ 3:11:
  45. Footnote ಕೀರ್ತ 118:22; ಯೆಶಾ 28:16:
  46. Footnote ಎಫೆ 4:15,16:
  47. Footnote 1 ಕೊರಿ 3:16,17:
  48. Footnote 1 ಪೇತ್ರ. 2:5:
  49. Footnote 2 ಕೊರಿ 6:16:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.