ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಎಫೆ 1
ಪೀಠಿಕೆ
ದೇವರ ಚಿತ್ತಾನುಸಾರವಾಗಿ 2ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು 3ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ 4ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ, 5ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ.
ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳು
ನಮ್ಮ ಕರ್ತನಾದ ಯೇಸುಕ್ರಿಸ್ತನ 6ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು 7ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. ನಾವು ಆತನ ಸನ್ನಿಧಿಯಲ್ಲಿ 8ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು 9ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. 10ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ11 ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ 12ಮೊದಲೇ ಸಂಕಲ್ಪಮಾಡಿದ್ದನು. ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ 13ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ 14ಪಾಪ ಕ್ಷಮಾಪಣೆಯೆಂಬ 15ವಿಮೋಚನೆಯು ಉಂಟಾಯಿತು. ಈ ಕೃಪೆಯನ್ನು ಆತನು 16ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. ಕಾಲವು ಪರಿಪೂರ್ಣವಾದಾಗ, ಆತನು 17ಭೂಪರಲೋಕಗಳಲ್ಲಿರುವ ಸಮಸ್ತವನ್ನು 18ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.
ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು 19ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
ನೀವು ಸಹ ನಿಮ್ಮ ರಕ್ಷಣಾ 20ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, 21ವಾಗ್ದಾನಮಾಡಲ್ಪಟ್ಟ 22ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 23ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ 24ಪವಿತ್ರಾತ್ಮನು 25ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ26. 27ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ಕೃತಜ್ಞತೆಯೂ ಪ್ರಾರ್ಥನೆಯೂ
ಹೀಗಿರಲಾಗಿ 28ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, 29ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ. 30ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ 31ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. 32ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು 33ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ, ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, 34ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ 35ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. ಇದಲ್ಲದೆ 36ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, 37ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. 38ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ 39ಅದು ಸಂಪೂರ್ಣತೆಯುಳ್ಳದ್ದಾಗಿದೆ.
Source notes (39)
- Footnote 1 ಕೊರಿ 1:1 ನೋಡಿರಿ
- Footnote ಕೊರಿ 1:1 ನೋಡಿರಿ
- Footnote ಕೆಲವು ಪ್ರತಿಗಳಲ್ಲಿ ಎಫೆಸದಲ್ಲಿರುವ ಎಂಬ ಪದ ಇಲ್ಲ; ಕೊಲೊ 4:16 ನೋಡಿರಿ.
- Footnote ಕೊಲೊ 1:2:
- Footnote ರೋಮಾ. 1:7 ನೋಡಿರಿ.
- Footnote ರೋಮಾ. 15:6 ನೋಡಿರಿ.
- Footnote ಎಫೆ 1:20; 2:6; 3:10:
- Footnote ಎಫೆ 5:27; ಕೊಲೊ 1:22; 1 ಥೆಸ. 4:7:
- Footnote ಎಫೆ 2:10; 2 ಥೆಸ. 2:13; 1 ಪೇತ್ರ 1:2:
- Footnote ಎಫೆ 1:12,14
- Footnote ರೋಮಾ. 8 15:
- Footnote ಎಫೆ 1:9,11; ರೋಮಾ. 8:29,30.
- Footnote ಅ. ಕೃ. 20:28:
- Footnote ಕೊಲೊ 1:14; ಅ. ಕೃ. 2:38:
- Footnote ರೋಮಾ. 3:24; 1 ಕೊರಿ 1:30.
- Footnote ರೋಮಾ. 16:25:
- Footnote ಕೊಲೊ 1:16, 20:
- Footnote ಕ್ರಿಸ್ತನ ಅಧಿಪತ್ಯಕ್ಕೆ ಅಥವಾ ಪ್ರಭುತ್ವಕ್ಕೆ ಅಧೀನಪಡಿಸಬೇಕೆಂದಿದ್ದನು.
- Footnote ಎಫೆ 1:5; 3:11; ರೋಮ. 8:28:
- Footnote ಕೊಲೊ 1:7:
- Footnote ಅ. ಕೃ. 1:4:
- Footnote ಎಫೆ 4:30.
- Footnote 1 ಪೇತ್ರ. 2:9; ತೀತ. 2:14:
- Footnote ಕೆಲವು ಪ್ರತಿಗಳಲ್ಲಿ, ಪವಿತ್ರಾತ್ಮವರವು ನಮ್ಮ ಬಾಧ್ಯತೆಗೆ ಸಂಚಕಾರವಾಗಿದೆ ಎಂದು ಬರೆದಿದೆ.
- Footnote ಅ. ಕೃ. 20:32; ಎಫೆ 1:18; 2 ಕೊರಿ 1:22; ಎಫೆ 4:30.
- Footnote ಮುಂಚಿತವಾಗಿ ಕೊಟ್ಟ ಹಣ ಅಥವಾ ಕಳುಹಿಸಿದ ಸಹಾಯಕ, ಮುಂಚಿತವಾಗಿ ಗೊತ್ತುಮಾಡಿದ ವ್ಯವಸ್ಥೆ ಅಥವಾ ಜಮೀನುದಾರ.
- Footnote ಎಫೆ 1:6, 12:
- Footnote ಕೊಲೊ 1:4; ಫಿಲೆ. 5:
- Footnote ಕೊಲೊ 1:9:
- Footnote ರೋಮಾ. 15:6:
- Footnote ಕೊಲೊ 1:9, 10:
- Footnote ಅ. ಕೃ. 26:18:
- Footnote ಎಫೆ 3:8,16, 17; 1:7; ಕೊಲೊ 1:27;
- Footnote ಎಫೆ 4:10; ಕೊರಿ 15:24; ಯೋಹಾ 3:31:
- Footnote ಫಿಲಿ. 2:9
- Footnote ಕೀರ್ತ 8:6; 1 ಕೊರಿ 15:27
- Footnote ಎಫೆ 4:15; 5:23; ಕೊಲೊ 1:18; 2:10,19.
- Footnote ಎಫೆ 4:12,16; 5:30; ಕೊಲೊ 1:18. 1 ಕೊರಿ 12:27:
- Footnote ಅಥವಾ, ಅದು ಆತನನ್ನು ಪರಿಪೂರ್ಣ ಮಾಡುತ್ತದೆ; ಮತ್ತು ಆತನ ದೊರೆತನವು ಅದರ ಎಲ್ಲಾ ಭಾಗಗಳಲ್ಲಿ ಪರಿಪೂರ್ಣವಾಗಿದೆ. ಎಫೆ 3:19; 4:10; ಕೊಲೊ 3:11:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.