ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಎಫೆ 3
ಅನ್ಯಜನರ ಬೋಧಕನಾದ ಪೌಲನು
ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ 1ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ 2ಸೆರೆಯಾಳಾಗಿದ್ದಾನೆ. 3ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ 4ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ, ಆತನು ಮರ್ಮವನ್ನು 5ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು 6ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ. ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು 7ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು. ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ 8ದೇವಜನರೊಂದಿಗೆ ಸಹಬಾಧ್ಯರೂ 9ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ. ದೇವರು 10ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ 11ನಾನು ಈ ಸುವಾರ್ತೆಗೆ ಸೇವಕನಾದೆನು. ಕ್ರಿಸ್ತನ 12ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು 13ಅನ್ಯಜನರಿಗೆ ಸಾರುವ ಹಾಗೆಯೂ ಹಾಗೂ 14ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ 15ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು 16ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು. 17ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ 18ನಿತ್ಯಸಂಕಲ್ಪದ ಮೇರೆಗೆ ತನ್ನ 19ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ 20ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು. 21ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ 22ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ. ಆದ್ದರಿಂದ 23ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 24ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಎಫೆಸದವರಿಗಾಗಿ ಪ್ರಾರ್ಥನೆ
ಹೀಗಿರಲಾಗಿ 25ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ 26ವಿಶೇಷಬಲವನ್ನು ಹೊಂದುವಂತೆಯೂ, 27ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು 28ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. 29ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, 30ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ. 31
ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ 32ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ 33ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.
Source notes (33)
- Footnote ಎಫೆ 3:13; ಕೊಲೊ 1:24:
- Footnote ಎಫೆ 4:1; ಅ. ಕೃ. 23:18. ಫಿಲಿ. 1:7. 2 ತಿಮೊ. 1:8 ಇತ್ಯಾದಿ.
- Footnote ಎಫೆ 1:10; ಕೊಲೊ 1:25:
- Footnote ವ. 7 ನೋಡಿರಿ.
- Footnote ಅ. ಕೃ. 22:17,21; 26:18. ಗಲಾ. 1:12; 2 ಕೊರಿ 12:1 ನೋಡಿರಿ.
- Footnote ಎಫೆ 1:9, 10 ನೋಡಿರಿ.
- Footnote 2 ಕೊರಿ 11:6 ನೋಡಿರಿ.
- Footnote ಗಲಾ. 3:29 ನೋಡಿರಿ. ಯೆಹೂದ್ಯರೊಂದಿಗೆ
- Footnote ಎಫೆ 2:16:
- Footnote ಎಫೆ 3:20; 1:19 ನೋಡಿರಿ.
- Footnote ಕೊಲೊ 1:23,25. 2 ಕೊರಿ 3:6 ನೋಡಿರಿ.
- Footnote ಎಫೆ 1:18; ರೋಮಾ. 2:4; 11:33:
- Footnote ಅ. ಕೃ. 9:15:
- Footnote ಎಫೆ 3:2,3:
- Footnote ಕೊಲೊ 1:26:
- Footnote 1 ಕೊರಿ 15:9:
- Footnote ಎಫೆ 1:11:
- Footnote ಅಥವಾ ನಿತ್ಯವಾದ ಉದ್ದೇಶದ ಪ್ರಕಾರ.
- Footnote ರೋಮಾ. 11:33:
- Footnote ಎಫೆ 1:21. ಎಫೆ 6:12:
- Footnote ಎಫೆ 2:18:
- Footnote ಇಬ್ರಿ. 4:16; 10:19:
- Footnote ವ. 1 ನೋಡಿರಿ.
- Footnote 2 ಕೊರಿ 1:6:
- Footnote ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ.
- Footnote ಎಫೆ 6:10; ಫಿಲಿ. 4:13; ಕೊಲೊ 1:11:
- Footnote ಎಫೆ 2:22:
- Footnote ವ. 8:
- Footnote ಅಥವಾ, ಆ ಸತ್ಯರ್ಥದ.
- Footnote ಎಫೆ 1:23; ಕೊಲೊ 2:10:
- Footnote ವ. 7:
- Footnote 2 ಕೊರಿ 9:8:
- Footnote ರೋಮಾ. 11:36:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.