Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಎಫೆ 4

ಕ್ರಿಸ್ತನ ದೇಹದಲ್ಲಿನ ಐಕ್ಯತೆ

ನೀವು ದೇವರಿಂದ 1ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ 2ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ 3ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಪೂರ್ಣ 4ವಿನಯ, ಸಾತ್ವಿಕತ್ವಗಳಿಂದಲೂ 5ದೀರ್ಘಶಾಂತಿಯಿಂದಲೂ ಕೂಡಿದವರಾಗಿ, 6ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 7ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. ನೀವು ಕರೆಯಲ್ಪಟ್ಟಾಗ 8ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, 9ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, 10ಒಬ್ಬನೇ ಆತ್ಮನನ್ನು ಹೊಂದಿದವರು, ನಿಮ್ಮೆಲ್ಲರಿಗೂ 11ಕರ್ತನು ಒಬ್ಬನೇ, 12ನಂಬಿಕೆಯು ಒಂದೇ, 13ದೀಕ್ಷಾಸ್ನಾನ ಒಂದೇ, 14ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. 15ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

ಆದರೆ 16ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ. ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ, 17

“ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ 18

ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ

ಮನುಷ್ಯರಿಗೆ ವರಗಳನ್ನು ಕೊಟ್ಟನು.” 19

“ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ? ಇಳಿದು ಬಂದಾತನು, 20ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ 21ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ. ಆತನು22 ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, 23ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು 24ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು. ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,25 ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ, ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, 26ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು. ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು 27ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ, 28ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ 29ಎಲ್ಲಾ ವಿಷಯಗಳಲ್ಲಿಯೂ 30ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ. 31ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, 32ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.

ಕ್ರಿಸ್ತನಲ್ಲಿ ಹೊಸ ಜೀವನ

ಕೊಲೊ 3:5-17

ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ 33ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. 34ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. 35ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು 36ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ 37ದೂರವಾಗಿದ್ದಾರೆ. ಅವರು ಲಜ್ಜೆಗೆಟ್ಟವರಾಗಿ 38ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ. ನೀವಾದರೋ 39ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. ಆತನಿಂದಲೇ ಕೇಳಿ 40ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ 41ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ 42ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. 43ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, 44ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ 45ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.

ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು 46“ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ 47ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ. 48“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. 49ಸೈತಾನನಿಗೆ ಅವಕಾಶಕೊಡಬೇಡಿರಿ. ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ 50ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. 51ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ 52ಕೇಳುವವರಿಗೆ ಹಿತವಾಗಿ ತೋರುವುದು. 53ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ 54ಮುದ್ರೆ ಹೊಂದಿದ್ದೀರಲ್ಲಾ. 55ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. 56ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು 57ಕ್ಷಮಿಸಿರಿ.

Source notes (57)
  1. Footnote ರೋಮಾ. 8:28:
  2. Footnote ಕೊಲೊ 2:6; 1 ಥೆಸ. 2:12; ಫಿಲಿ. 1:27:
  3. Footnote ಎಫೆ 3:1:
  4. Footnote ಫಿಲಿ. 2:3; ಕೊಲೊ 3:12; 1 ಪೇತ್ರ. 3:5.
  5. Footnote ಕೊಲೊ 1:11:
  6. Footnote ಕೊಲೊ 3:13:
  7. Footnote ಕೊಲೊ 3:14,15:
  8. Footnote ಎಫೆ 1:18:
  9. Footnote ಎಫೆ 2:16:
  10. Footnote ಎಫೆ 2:18:
  11. Footnote ಜೆಕ. 14:9; 1 ಕೊರಿ 8:6:
  12. Footnote ಎಫೆ 4:13; ಯೂದ. 3:
  13. Footnote ಗಲಾ. 3:27,28:
  14. Footnote 1 ಕೊರಿ 12:5,6:
  15. Footnote ರೋಮಾ. 9:5:
  16. Footnote ರೋಮಾ. 12:3; ಎಫೆ 4:16; 1 ಕೊರಿ 12:7; ಮತ್ತಾ 25 15:
  17. Footnote ಕೀರ್ತ 68:18:
  18. Footnote ನ್ಯಾಯ 5:12; ಕೊಲೊ 2:15:
  19. Footnote ಯೋಹಾ 3:13:
  20. Footnote ಎಫೆ 1:23:
  21. Footnote ಇಬ್ರಿ. 4:14; 7:26; 9:24:
  22. Footnote 1 ಕೊರಿ 12:28:
  23. Footnote ಅ. ಕೃ. 21:8; 2 ತಿಮೊ. 4:5:
  24. Footnote ಯೆರೆ 3:15; ಅ. ಕೃ 20:28:
  25. Footnote ಎಫೆ 1:23:
  26. Footnote 1 ಕೊರಿ 12:27; ಎಫೆ 4:16,29:
  27. Footnote ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12.
  28. Footnote 1 ಯೋಹಾ 3:18.
  29. Footnote ಎಫೆ 2:21
  30. Footnote ಎಫೆ 1:22:
  31. Footnote ಕೊಲೊ 2:19:
  32. Footnote ವ. 7 ನೋಡಿರಿ
  33. Footnote ಎಫೆ 4:22; 2:1-3 ಕೊಲೊ 3:7; 1 ಪೇತ್ರ. 4:3:
  34. Footnote ರೋಮಾ. 1:21; ಕೊಲೊ 2:18:
  35. Footnote ರೋಮಾ. 11:10:
  36. Footnote ಮಾರ್ಕ 3:5:
  37. Footnote ಎಫೆ 2:12:
  38. Footnote ರೋಮಾ. 1:24,26,28:
  39. Footnote ಮೂಲ, ಕ್ರಿಸ್ತನನ್ನು. ಮತ್ತಾ 11:29:
  40. Footnote ಕೊಲೊ 2:7:
  41. Footnote ಕೊಲೊ 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1:
  42. Footnote ರೋಮಾ. 6:6; ಕೊಲೊ 3:9:
  43. Footnote ರೋಮಾ. 12:2:
  44. Footnote ರೋಮಾ. 16:4:
  45. Footnote ಎಫೆ 2:10:
  46. Footnote ಜೆಕ. 8:16; ಕೊಲೊ 3:9:
  47. Footnote ರೋಮಾ. 12:5:
  48. Footnote ಕೀರ್ತ 4:4.
  49. Footnote ಯಾಕೋಬ. 4:7:
  50. Footnote 1 ಥೆಸ. 4:11; 2 ಥೆಸ. 3:8, 11:
  51. Footnote ಎಫೆ 5:4; ಕೊಲೊ 3:8; ಮತ್ತಾ 12:34:
  52. Footnote ಕೊಲೊ 4:6:
  53. Footnote ಯೆಶಾ 63:10; 1 ಥೆಸ. 5:19:
  54. Footnote ಎಫೆ 1:13:
  55. Footnote ಕೊಲೊ 3:8:
  56. Footnote ಕೊಲೊ 3:12,3; 1 ಪೇತ್ರ. 3:8:
  57. Footnote 2 ಕೊರಿ 2:7,10; ಮತ್ತಾ 6:14:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.