ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಪ್ರಕ 16
ದೇವರ ಕೋಪದ ಬಟ್ಟಲುಗಳು
ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು 1ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ 2ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ 3ಸುರಿಯಿರಿ” ಎಂದು ಹೇಳಿತು.
ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು 4ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ 5ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.
ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ 6ರಕ್ತದ ಹಾಗಾಯಿತು ಮತ್ತು 7ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.
ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು 8ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ 9ಅವುಗಳ ನೀರು ರಕ್ತವಾಯಿತು.
ಆ ಮೇಲೆ ಜಲಾಧಿಪತಿಯಾದ ದೂತನು, “ನೀನು 10ಇರುವಾತನೂ 11 ಇದ್ದಾತನೂ 12ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. ಅವರು 13ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು 14ಸುರಿಸಿದ್ದರಿಂದ, 15ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು. ಆ ಮೇಲೆ 16ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, 17ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು.
ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು 18ದೂಷಿಸಿದಲ್ಲದೆ, ಅವರು 19ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.
ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ 20ಸಿಂಹಾಸನದ ಮೇಲೆ ಸುರಿಯಲು 21ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, ತಮ್ಮ ಯಾತನೆಗಳಿಗಾಗಿಯೂ 22ಹುಣ್ಣುಗಳ ದೆಸೆಯಿಂದಲೂ 23ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.
ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು 24ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, 25ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ 26ಅದರ ನೀರು ಬತ್ತಿಹೋಯಿತು. ಆಗ 27ಘಟಸರ್ಪದ ಬಾಯಿಂದ, 28ಮೃಗದ ಬಾಯಿಂದ ಮತ್ತು 29ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. ಇವು 30ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ 31ದೇವರ ಮಹಾದಿನದ 32ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು. “ಇಗೋ 33ಕಳ್ಳನು ಬರುವಂತೆ ಬರುತ್ತೇನೆ. 34ತಾನು 35ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ 36ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.”
ಆಗ 37ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ 38ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.
ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ 39ಆಯಿತು” ಎಂದು ಹೇಳಿತು. ಆಗ 40ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ 41ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. 42ಮಹಾ ಪಟ್ಟಣವು 43ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ 44ಬಾಬೆಲನ್ನು 45ಜ್ಞಾಪಿಸಿಕೊಂಡು 46ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು. ಆಗ ಪ್ರತಿಯೊಂದು 47ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು. ಮತ್ತು ಆಕಾಶದಿಂದ ಮನುಷ್ಯರ ಮೇಲೆ 48ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು 49ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು 50ದೇವರನ್ನು ದೂಷಿಸಿದರು.
Source notes (50)
- Footnote ಪ್ರಕ 15:1:
- Footnote ಪ್ರಕ 15:7:
- Footnote ಕೀರ್ತ 79:6; ಯೆರೆ 10:25; ಚೆಫ. 3:8:
- Footnote ಪ್ರಕ 13:16:
- Footnote ವ. 11; ವಿಮೋ 9:9-11:
- Footnote ಪ್ರಕ 8:8:
- Footnote ಪ್ರಕ 8:9; ವಿಮೋ 7:20, 21
- Footnote ಪ್ರಕ 8:10:
- Footnote ವಿಮೋ 7:17-20:
- Footnote ಪ್ರಕ 11:17; 1:4, 8; 4:8:
- Footnote ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ 1:4:
- Footnote ಪ್ರಕ 15:4:
- Footnote ಪ್ರಕ 11:18:
- Footnote ಪ್ರಕ 13:15; 18:24
- Footnote ಯೆಶಾ 49:26; ಲೂಕ 11:49, 50.
- Footnote ಪ್ರಕ 6:9; 14:18. ಅಥವಾ, ಬಲಿ ಕೊಡುವ ಸ್ಥಳ
- Footnote ಪ್ರಕ 15:3; ಕೀರ್ತ 119:137:
- Footnote ಪ್ರಕ 16:11, 21:
- Footnote ದಾನಿ. 5:22 23; ಪ್ರಕ 2:21:
- Footnote ಪ್ರಕ 13:2:
- Footnote ವಿಮೋ 10:21-23; ಪ್ರಕ 9:2:
- Footnote ವ. 2:
- Footnote ಪ್ರಕ 11:13
- Footnote ಪ್ರಕ 9:14:
- Footnote ಯೆಶಾ 41:2, 25; 46:11:
- Footnote ಯೆಶಾ 11:15; 44:27; ಯೆರೆ 50. 38; 51:32, 36:
- Footnote ಪ್ರಕ 12:3, 9:
- Footnote ಪ್ರಕ 13
- Footnote ಪ್ರಕ 13:11-17; 19:20; 20:10:
- Footnote ಪ್ರಕ 13:13; 1 ತಿಮೊ. 4:1:
- Footnote ಪ್ರಕ 6:17:
- Footnote ಪ್ರಕ 20:8; 17:14; 19:19:
- Footnote ಪ್ರಕ 3:3:
- Footnote ಪ್ರಕ 3:18:
- Footnote ಬೆತ್ತಲೆಯಾಗಿ.
- Footnote ಮತ್ತಾ 24:42; 25:13; 26:41; ಮಾರ್ಕ 14:34-38; 1 ಕೊರಿ 16:13:
- Footnote ಅಶುದ್ಧಾತ್ಮಗಳು ಅಥವಾ ದೆವ್ವಗಳು.
- Footnote ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ 5:19:
- Footnote ಪ್ರಕ 10:6
- Footnote ಪ್ರಕ 4:5; 8:5; 11:19:
- Footnote ಪ್ರಕ 6:12; 11:13:
- Footnote ಪ್ರಕ 11:8:
- Footnote ಪ್ರಕ 11:13:
- Footnote ಪ್ರಕ 14:8:
- Footnote ಪ್ರಕ 18:5:
- Footnote ಪ್ರಕ 14:10:
- Footnote ಪ್ರಕ 6:14:
- Footnote ಪ್ರಕ 11:19; ವಿಮೋ 9:23-25
- Footnote ಮೂಲ: ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ.
- Footnote ಪ್ರಕ 16:9, 11:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.