Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 15

ಅಂತಿಮ ಉಪದ್ರವಗಳು

ಪರಲೋಕದಲ್ಲಿ ಆಶ್ಚರ್ಯಕರವಾದ 1ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು. 2ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.

ನಾನು ನೋಡಲಾಗಿ 3ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ 4ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ 5ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು 6ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ 7ಬಳಿಯಲ್ಲಿ ನಿಂತಿದ್ದರು. ಅವರು 8ದೇವರ ದಾಸನಾದ 9ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ, 10

“ಕರ್ತನಾದ ದೇವರೇ ಸರ್ವಶಕ್ತನೇ,

ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ. 11

ಸರ್ವಜನಾಂಗಗಳ ಅರಸನೇ. 12

ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.

ಕರ್ತನೇ, 13ನಿನಗೆ ಭಯಪಡದವರು

ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ? 14

ನೀನೊಬ್ಬನೇ ಪರಿಶುದ್ಧನು.

ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ 15

ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು

ನಿನ್ನನ್ನು ಆರಾಧಿಸುವರು.”

ಇದಾದ ನಂತರ ನಾನು ನೋಡಿದಾಗ 16ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು. ಆ ಆಲಯದೊಳಗಿಂದ ಏಳು 17ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು 18ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. 19ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ 20ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ 21ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು. 22ದೇವರ ಮಹಿಮೆಯಿಂದಲೂ, ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ 23ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

Source notes (23)
  1. Footnote ಪ್ರಕ 12:1, 3:
  2. Footnote ಪ್ರಕ 16:1; 17:1; 21:9:
  3. Footnote ಪ್ರಕ 4:6:
  4. Footnote ಪ್ರಕ 13:17:
  5. Footnote ಪ್ರಕ 12:11:
  6. Footnote ಪ್ರಕ 5:8; 14:2:
  7. Footnote ಅಥವಾ ಮೇಲೆ.
  8. Footnote ಇಬ್ರಿ. 3:5:
  9. Footnote ವಿಮೋ 15:1; ಧರ್ಮೋ 31:30.
  10. Footnote ಧರ್ಮೋ 32:3, 4; ಯೋಬ. 37:5; ಕೀರ್ತ 111:2; 139:14; 145:17:
  11. Footnote ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ.
  12. Footnote ಪ್ರಕ 16:7; ಹೋಶೇ. 14:9:
  13. Footnote ಪ್ರಕ 14:7; ಮಲಾ. 2:2:
  14. Footnote ಪ್ರಕ 16:5:
  15. Footnote ಕೀರ್ತ 86:9:
  16. Footnote ವಿಮೋ 38:21; ಅರಣ್ಯ 1:5 0; ಅ. ಕೃ. 7:44; ಪ್ರಕ 11:19:
  17. Footnote ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು.
  18. Footnote ಪ್ರಕ 1:13:
  19. Footnote ಪ್ರಕ 4:6:
  20. Footnote ಪ್ರಕ 1:18; 4:9; 5:13:
  21. Footnote ಪ್ರಕ 5:8:
  22. Footnote ವಿಮೋ 40. 34; ಯೆಶಾ 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ 5:13, 14:
  23. Footnote ವಿಮೋ 40. 35; 1 ಅರಸು. 8:11:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.