Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 17

ಬಾಬೆಲೆಂಬ ಜಾರಸ್ತ್ರೀಯ ನಾಶವು

1

ಏಳು ಬಟ್ಟಲುಗಳನ್ನು ಹಿಡಿದಿದ್ದ 2ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, 3ಬಹಳ ನೀರುಗಳ ಮೇಲೆ ಕುಳಿತ್ತಿರುವ 4ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. 5ಅವಳೊಂದಿಗೆ ಭೂರಾಜರು 6ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು 7ಮತ್ತರಾದರು” ಎಂದು ನನಗೆ ಹೇಳಿದನು. ಆಗ ಅವನು ದೇವರಾತ್ಮವಶನಾದ ನನ್ನನ್ನು 8ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು 9ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ 10ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. 11ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು 12ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ 13ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು. ಅವಳ ಹಣೆಯ ಮೇಲೆ, “ಮಹತ್ತಾದ 14ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ” ಎಂಬ 15ಹೆಸರನ್ನು ಬರೆಯಲಾಗಿತ್ತು. ಆ ಸ್ತ್ರೀಯು 16ನೀತಿವಂತರ ರಕ್ತವನ್ನೂ 17ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು.

ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು. ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ “ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ 18ಗೂಢಾರ್ಥವನ್ನು 19ನಾನು ನಿನಗೆ ವಿವರಿಸುತ್ತೇನೆ. ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು 20ಅಧೋಲೋಕದೊಳಗಿನಿಂದ 21ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು 22ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು.

“ಇದನ್ನು ಗ್ರಹಿಸಿಕೊಳ್ಳಲು 23ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. 24ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ. ಇದಲ್ಲದೆ 25ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.

“26ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ 27ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು. ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು. 28ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು 29ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು 30ಅವರನ್ನು ಜಯಿಸುವನು ಮತ್ತು ದೇವರು 31ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.”

ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, 32“ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು. ಇದಲ್ಲದೆ ನೀನು ನೋಡಿದ 33ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ 34ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, 35ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು. ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ 36ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು. ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ 37ಮಹಾನಗರಿಯೇ ಆಗಿದೆ.”

Source notes (37)
  1. Footnote ಪ್ರಕ 15:7:
  2. Footnote ಪ್ರಕ 21:9
  3. Footnote ಯೆರೆ 51:13; ಪ್ರಕ 17:15:
  4. Footnote ನಹೂ. 3:4; ಪ್ರಕ 19:2; ಯೆಶಾ 1:21; ಯೆರೆ 2:20
  5. Footnote ಅಥವಾ ಅವಳ ದುಷ್ಕರ್ಮವನ್ನು ನೋಡಿ.
  6. Footnote ಅಂದರೆ, ದೇವದ್ರೋಹ; ಯೆಶಾ 23:17; ನಹೂ. 3:4:
  7. Footnote ಯೆರೆ 51:7; ಪ್ರಕ 14:8:
  8. Footnote ಪ್ರಕ 21:10; ಯೆರೆ 43:5:
  9. Footnote ಪ್ರಕ 12:3:
  10. Footnote ಪ್ರಕ 13:1
  11. Footnote ಪ್ರಕ 17:7, 9, 12:
  12. Footnote ನೇರಳೆ. ಪ್ರಕ 18:16:
  13. Footnote ಯೆರೆ 51:7; ಪ್ರಕ 18:6:
  14. Footnote ಪ್ರಕ 14:8:
  15. Footnote ವ. 7:
  16. Footnote ಪ್ರಕ 16:6; 13:15:
  17. Footnote ಪ್ರಕ 2:13:
  18. Footnote ವ. 5:
  19. Footnote ವ. 11; ಪ್ರಕ 1:4; 13:3:
  20. Footnote ಪ್ರಕ 9:1:
  21. Footnote ಪ್ರಕ 11:7:
  22. Footnote ಪ್ರಕ 3:5:
  23. Footnote ಪ್ರಕ 13:18:
  24. Footnote ಅಥವಾ, ಇದಲ್ಲದೆ ಏಳು ಮಂದಿ ಅರಸುಗಳಿದ್ದಾರೆ.
  25. Footnote ವ. 8; ಪ್ರಕ 11:17:
  26. Footnote ವ. 16; ದಾನಿ. 7:24; ಜೆಕ. 1:18-21; ಪ್ರಕ 13:1:
  27. Footnote ಪ್ರಕ 18:10, 17, 19:
  28. Footnote ಪ್ರಕ 16:14:
  29. Footnote ಧರ್ಮೋ 10:17; ಕೀರ್ತ 136:3; ದಾನಿ. 2:47; 1 ತಿಮೊ. 6:15; ಪ್ರಕ 19:16; ಅ. ಕೃ. 10:36:
  30. Footnote ಪ್ರಕ 3:21:
  31. Footnote ಲೂಕ 18:7; ರೋಮಾ. 1:6:
  32. Footnote ವ. 1:
  33. Footnote ವ. 12; ದಾನಿ. 7:24; ಜೆಕ. 1:18-21; ಪ್ರಕ 13:1:
  34. Footnote ಯೆಹೆ. 16:37, 39:
  35. Footnote ಪ್ರಕ 18:8; ಯಾಜ 21:9:
  36. Footnote 2 ಥೆಸ. 2:11:
  37. Footnote ಪ್ರಕ 16:19; 11:8:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.