Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 29

ದಾವೀದನ ಕೀರ್ತನೆ.

ದೇವದೂತರೇ, ಬಲವು ಯೆಹೋವ ದೇವರದೇ,

ಮಹಿಮೆ ಯೆಹೋವ ದೇವರದೇ ಎಂದು ಹೇಳಿ ಕೊಂಡಾಡಿರಿ.

ಯೆಹೋವ ದೇವರ ನಾಮಕ್ಕೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ;

ಪರಿಶುದ್ಧತ್ವವೆಂಬ ವಸ್ತ್ರದೊಡನೆ ಯೆಹೋವ ದೇವರನ್ನು ಆರಾಧಿಸಿರಿ.

ಯೆಹೋವ ದೇವರ ಧ್ವನಿಯು ಜಲರಾಶಿಗಳ ಮೇಲೆ ಇದೆ;

ಮಹಿಮೆಯ ದೇವರು ಇದ್ದಾರೆ;

ಯೆಹೋವ ದೇವರು ಮಹಾಸಾಗರಗಳ ಮೇಲೆ ಇದ್ದಾರೆ.

ಯೆಹೋವ ದೇವರ ಧ್ವನಿಯು ಶಕ್ತಿಯುಳ್ಳದ್ದು;

ಯೆಹೋವ ದೇವರ ಧ್ವನಿಯು ವೈಭವವುಳ್ಳದ್ದು.

ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ;

ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ.

ಲೆಬನೋನ್ ಪರ್ವತವು ಕರುವಿನ ಹಾಗೆಯೂ

ಸಿರ್ಯೋನ್ ಬೆಟ್ಟವು ಎಳೆಯ ಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾರೆ.

ಯೆಹೋವ ದೇವರ ಧ್ವನಿಯು

ಸಿಡಿಲಿನ ಮಿಂಚಿನಂತೆ ಅಪ್ಪಳಿಸುತ್ತದೆ.

ಯೆಹೋವ ದೇವರ ಶಬ್ದವು ಮರುಭೂಮಿಯನ್ನು ನಡುಗಿಸುತ್ತದೆ;

ಯೆಹೋವ ದೇವರು ಕಾದೇಶ್ ಮರುಭೂಮಿಯನ್ನು ನಡುಗಿಸುತ್ತಾರೆ.

ಯೆಹೋವ ದೇವರ ಧ್ವನಿಯು ಜಿಂಕೆಗಳು ಈಯುವಂತೆ ಮಾಡಿ

ಅಡವಿಗಳನ್ನು ಬಯಲು ಮಾಡುತ್ತದೆ;

ದೇವರ ಮಂದಿರದಲ್ಲಿ ಪ್ರತಿಯೊಬ್ಬರೂ “ಮಹಿಮೆ!” ಎಂದು ಘೋಷಿಸುತ್ತಾರೆ.

ಯೆಹೋವ ದೇವರು ಪ್ರಳಯದ ಮೇಲೆ ಕುಳಿತುಕೊಳ್ಳುತ್ತಾರೆ;

ಯುಗಯುಗಕ್ಕೂ ಯೆಹೋವ ದೇವರು ಅರಸರಾಗಿ ಕುಳಿತುಕೊಂಡಿದ್ದಾರೆ.

ಯೆಹೋವ ದೇವರು ತಮ್ಮ ಜನರಿಗೆ ಬಲವನ್ನು ಕೊಡುವರು;

ಯೆಹೋವ ದೇವರು ತಮ್ಮ ಜನರನ್ನು ಸಮಾಧಾನದಿಂದ ಆಶೀರ್ವದಿಸುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.