Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 110

ದಾವೀದನ ಕೀರ್ತನೆ.

ಯೆಹೋವ ದೇವರು ನನ್ನ ಕರ್ತ ಆಗಿರುವವರಿಗೆ ಹೇಳಿದ್ದೇನೆಂದರೆ:

“ನಾನು ನಿನ್ನ ವಿರೋಧಿಗಳನ್ನು

ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ

ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರಿ.”

ನಿಮ್ಮ ಬಲವಾದ ರಾಜದಂಡವನ್ನು ಯೆಹೋವ ದೇವರು ಚೀಯೋನಿನ ಹೊರಗೂ ವಿಸ್ತರಿಸುವರು.

“ನಿಮ್ಮ ಶತ್ರುಗಳ ಮಧ್ಯದಲ್ಲಿ ದೊರೆತನ ಮಾಡಿರಿ,”

ಎಂದು ಅವರು ನಿಮಗೆ ಹೇಳುವರು.

ನೀವು ನಿಮ್ಮ ಸೈನ್ಯವನ್ನು

ಒಟ್ಟುಗೂಡಿಸುವ ದಿನದಲ್ಲಿ

ನಿಮ್ಮ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.

ಮುಂಜಾನೆಯ ಉದರದಿಂದ ಬರುವ ಇಬ್ಬನಿಯಂತೆ

ನಿಮ್ಮ ಯೋಧರು ನಿಮ್ಮ ಕಡೆ ಇಳಿದು ಬರುವರು.

“ನೀವು ಸದಾಕಾಲವೂ ಮೆಲ್ಕಿಜೆದೇಕನ

ಕ್ರಮದ ಯಾಜಕರಾಗಿದ್ದೀರಿ,”

ಎಂದು ಯೆಹೋವ ದೇವರು ಆಣೆಯಿಟ್ಟು ಹೇಳಿದ್ದಾರೆ.

ಅವರು ತಮ್ಮ ಮನಸ್ಸನ್ನು ಬದಲಾಯಿಸರು.

ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿದ್ದಾರೆ;

ಅವರು ತಮ್ಮ ತೀರ್ಪಿನ ದಿನದಲ್ಲಿ ಅರಸರನ್ನು ದಂಡಿಸುವರು.

ದೇವರು ಜನಾಂಗಗಳನ್ನು ನ್ಯಾಯತೀರಿಸುವಾಗ,

ವಿಸ್ತಾರವಾದ ರಣರಂಗದಲ್ಲಿ ಶತ್ರುಗಳನ್ನು ದಂಡಿಸಿ ಅವರಿಗೆ ಮರಣದಂಡನೆ ವಿಧಿಸುವರು.

ಕರ್ತ ಆಗಿರುವವರು ದಾರಿಯುದ್ದಕ್ಕೂ ಹಳ್ಳದಿಂದ ನೀರು ಕುಡಿಯುತ್ತಾ,

ಜಯದ ಮಾರ್ಗದಲ್ಲಿ ತಲೆಯೆತ್ತಿ ನಡೆದುಹೋಗುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.