Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಯೋಬ 25
ಬಿಲ್ದದನ ಉತ್ತರ
ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನೆಂದರೆ:
“ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ;
ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.
ದೇವರ ಸೈನ್ಯಗಳಿಗೆ ಲೆಕ್ಕ ಉಂಟೋ?
ಯಾರ ಮೇಲೆ ದೇವರ ಬೆಳಕು ಮೂಡುವುದಿಲ್ಲ?
ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ?
ಸ್ತ್ರೀಯಿಂದ ಹುಟ್ಟಿದವನು ಪರಿಶುದ್ಧನಾಗಿರುವುದು ಹೇಗೆ?
ಇಗೋ, ಚಂದ್ರನೂ ಪ್ರಕಾಶಮಾನವಾಗಿರುವದಿಲ್ಲ;
ನಕ್ಷತ್ರಗಳಾದರೂ ದೇವರ ದೃಷ್ಟಿಗೆ ಶುದ್ಧವಾದವುಗಳಲ್ಲ.
ಹೀಗಿರುವಲ್ಲಿ ಹುಳುವಿನಂಥ ಮನುಷ್ಯನು ದೇವರ ದೃಷ್ಟಿಯಲ್ಲಿ ಎಷ್ಟೋ ಕಡಿಮೆ!
ಕ್ರಿಮಿಯಂಥ ಮನವರು ಎಷ್ಟೋ ಅಲ್ಪರು!”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.