Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 19

ಇದಾದ ಮೇಲೆ 1ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “2ಹಲ್ಲೆಲೂಯಾ. 3ರಕ್ಷಣೆಯೂ, 4ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ. 5ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ 6ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ 7ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಎಂದು ಹೇಳಿ, ಎರಡನೆಯ ಸಾರಿ, “ಹಲ್ಲೆಲೂಯಾ ಎಂದು ಆರ್ಭಟಿಸಿ, 8ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ” ಎಂದು ಹೇಳಿದರು. ಆಗ 9ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ, 10“ಆಮೆನ್, ಹಲ್ಲೆಲೂಯಾ” ಎಂದರು.

ಕುರಿಮರಿಯ ವಿವಾಹದ ಔತಣ

ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, “ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು 11ನಮ್ಮ ದೇವರನ್ನು ಕೊಂಡಾಡಿರಿ” ಎಂದು ಹೇಳಿತು. ತರುವಾಯ 12ಬಹುದೊಡ್ಡ ಜನರ ಸಮೂಹದ ಶಬ್ದವು 13ಜಲಪ್ರವಾಹದ ಘೋಷದಂತೆಯೂ 14ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, “ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು 15ಆಳುತ್ತಾನೆ. 16ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು 17ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು. 18ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ 19ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ). ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, 20“ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿ, 21“ಈ ಮಾತುಗಳು ದೇವರ ಸತ್ಯವಚನಗಳಾಗಿವೆ” ಅಂದನು.

ಆಗ 22ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು 23ಅವನು, “ಹೀಗೆ ಮಾಡಬೇಡ ನೋಡು, ನಾನು ನಿನಗೂ, 24ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ 25ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು. 26

ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ, 27ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ 28ನಂಬಿಗಸ್ತನು, ಸತ್ಯವಂತನು ಎಂದು ಹೆಸರು. 29ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ. 30ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತಿವೆ, ಆತನ ತಲೆಯ ಮೇಲೆ 31ಅನೇಕ ಕಿರೀಟಗಳುಂಟು, 32ಆತನಿಗೆ ಒಂದು ಹೆಸರು ಬರೆದುಕೊಡಲ್ಪಟ್ಟಿದೆ, 33ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು. ಆತನು 34ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. 35ಆತನಿಗೆ ದೇವರ ವಾಕ್ಯವೆಂದು ಹೆಸರು. ಪರಲೋಕದಲ್ಲಿರುವ ಸೈನ್ಯವು 36ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು. 37ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ. 38ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು. 39ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು. ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ “40ರಾಜಾಧಿರಾಜನೂ ಕರ್ತಾಧಿ ಕರ್ತನೂ” ಎಂಬ 41ಹೆಸರು ಬರೆದಿದೆ.

ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ 42ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, “ಬನ್ನಿರಿ, 43ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ, ರಾಜರ ಮಾಂಸವನ್ನೂ, ಸಹಸ್ರಾಧಿಪತಿಗಳ ಮಾಂಸವನ್ನೂ, ಪರಾಕ್ರಮಶಾಲಿಗಳ ಮಾಂಸವನ್ನೂ, ಕುದುರೆಗಳ ಮಾಂಸವನ್ನೂ, ಕುದುರೆ ಸವಾರರ ಮಾಂಸವನ್ನೂ, ಸ್ವತಂತ್ರರೂ, ದಾಸರೂ, ಶ್ರೇಷ್ಠರು ಮತ್ತು ಕನಿಷ್ಠರು ಇವರೆಲ್ಲರ ಮಾಂಸವನ್ನೂ ತಿನ್ನುವುದಕ್ಕೆ ಬನ್ನಿರಿ” ಎಂದು ಹೇಳಿದನು.

ತರುವಾಯ 44ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ 45ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು. ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ 46ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ 47ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ 48ಗಂಧಕದಿಂದ ಉರಿಯುವ 49ಬೆಂಕಿಯ ಕೆರೆಗೆ ಹಾಕಲಾಯಿತು. ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ 50ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು, 51ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.

Source notes (51)
  1. Footnote ಪ್ರಕ 11:15:
  2. Footnote ಅಂದರೆ. ಕರ್ತನನ್ನು ಸ್ತುತಿಸಿರಿ; ಕೀರ್ತ 105:45; 106:1:
  3. Footnote ಅಥವಾ, ರಕ್ಷಣೆಯೂ.
  4. Footnote ಪ್ರಕ 4:11; 7:10; 12:10:
  5. Footnote ಪ್ರಕ 15:3; 16:7:
  6. Footnote ಪ್ರಕ 17:1:
  7. Footnote ಧರ್ಮೋ 32:43; 2 ಅರಸು. 9:7; ಪ್ರಕ 6:10; 16:6:
  8. Footnote ಯೆಶಾ 34:10; ಪ್ರಕ 18:9, 18; ಪ್ರಕ 14:11:
  9. Footnote ಪ್ರಕ 4:4, 6, 10; 5:14:
  10. Footnote ಅಂದರೆ, ತಥಾಸ್ತು, ಹಾಗೆಯೇ ಆಗಲಿ.
  11. Footnote ಕೀರ್ತ 22:23; 113:1; 134:1; 135:1:
  12. Footnote ವ. 1; ದಾನಿ. 10:6:
  13. Footnote ಪ್ರಕ 1:15:
  14. Footnote ಪ್ರಕ 6:1; 14:2;
  15. Footnote ಕೀರ್ತ 97:1; ಪ್ರಕ 11:15, 17:
  16. Footnote ಮತ್ತಾ 22:2; 25:10; ಲೂಕ 12:36; 14:8; ಎಫೆ 5:22-32:
  17. Footnote ಪ್ರಕ 21:2, 9; ಯೆಶಾ 54:5, 6; ಹೋಶೇ. 2:19, 20:
  18. Footnote ಕೀರ್ತ 45:13-15; ಯೆಹೆ. 16:10:
  19. Footnote ಕೀರ್ತ 132:9; ಯೆಶಾ 61:10:
  20. Footnote ವ. 7; ಲೂಕ 14:15:
  21. Footnote ಪ್ರಕ 21:5; 22:6:
  22. Footnote ಪ್ರಕ 22:8:
  23. Footnote ಪ್ರಕ 22:9; ಅ. ಕೃ. 10:26; 14:15:
  24. Footnote ಪ್ರಕ 1:2; 6:9; 12:17:
  25. Footnote ಅಥವಾ, ನಮಸ್ಕಾರಮಾಡು; ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿಸುವ ಆತ್ಮನು ಪ್ರವಾದನೆಯನ್ನು ಹೇಳಿಸುವ ಆತ್ಮನೇ ಅಂದನು.
  26. Footnote ಯೆಹೆ. 1:1:
  27. Footnote ಪ್ರಕ 6:2:
  28. Footnote ಪ್ರಕ 3:7, 14
  29. Footnote ಕೀರ್ತ 96:13; ಯೆಶಾ 11:4:
  30. Footnote ಪ್ರಕ 1:14; 2:18:
  31. Footnote ಪ್ರಕ 12:3:
  32. Footnote ವ. 16:
  33. Footnote ಪ್ರಕ 2:17:
  34. Footnote ಯೆಶಾ 63:2,3.
  35. Footnote ಯೋಹಾ 1:1-18:
  36. Footnote ಪ್ರಕ 3:4; 7:9:
  37. Footnote ಯೆಶಾ 11:4; 2 ಥೆಸ. 2:8; ಇಬ್ರಿ. 4:12:
  38. Footnote ಕೀರ್ತ 2:9; ಪ್ರಕ 2:27; 12:5:
  39. Footnote ಯೆಶಾ 63:3; ಪ್ರಕ 14:20:
  40. Footnote ಪ್ರಕ 17:14:
  41. Footnote ವ. 12:
  42. Footnote ವ. 21:
  43. Footnote ಯೆಶಾ 34:6; ಯೆರೆ 12:9; 46:10; ಯೆಹೆ. 39:17-20:
  44. Footnote ಪ್ರಕ 11:7; 13:1:
  45. Footnote ಪ್ರಕ 16:14, 16:
  46. Footnote ಪ್ರಕ 13:11-17; 16:13:
  47. Footnote ಪ್ರಕ 13:15:
  48. Footnote ಆದಿ 19:24; ಪ್ರಕ 14:10; 21:8; 2 ಥೆಸ. 1:8:
  49. Footnote ಪ್ರಕ 20:10, 14, 15; ದಾನಿ. 7:11:
  50. Footnote ವ. 15:
  51. Footnote ವ. 17:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.