Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 11

ಯೆಹೋವನ ಶರಣರಿಗೆ ದುರ್ಗತಿಯಿಲ್ಲ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು.

ನಾನು ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ. ನೀವು, “ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ” ಎಂದು ಹೇಳುವುದೇಕೆ?

ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು ಬಿಲ್ಲುಬೊಗ್ಗಿಸಿ,

ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ.

ಆಧಾರಗಳೇ ಕೆಡವಲ್ಪಟ್ಟ ಮೇಲೆ ನೀತಿವಂತನ ಗತಿ ಏನಾದೀತು?

ಯೆಹೋವನು ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ;

ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ.

ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ;

ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ.

ಯೆಹೋವನು ನೀತಿವಂತರನ್ನು ಮತ್ತು ಅನೀತಿವಂತರನ್ನು ಪರೀಕ್ಷಿಸುತ್ತಾನೆ;

ಬಲಾತ್ಕಾರವನ್ನು ಪ್ರೀತಿಸುವವರನ್ನು ಆತನು ದ್ವೇಷಿಸುತ್ತಾನೆ.

ಆತನು ದುಷ್ಟರ ಮೇಲೆ ಬೆಂಕಿ ಗಂಧಕಗಳನ್ನು ಸುರಿಸಲಿ.

ಉರಿಗಾಳಿಗಳನ್ನು ಅವರಿಗೆ ಪಾನವಾಗಮಾಡಲಿ.

ಏಕೆಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ.

ಸಜ್ಜನರು ಆತನ ಸಾನ್ನಿಧ್ಯವನ್ನು ಸೇರುವರು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.