Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಇಬ್ರಿ 6

ಆದುದರಿಂದ ಕ್ರಿಸ್ತನ ವಿಷಯವಾದ ಪ್ರಾಥಮಿಕ ಉಪದೇಶವನ್ನು ಬಿಟ್ಟು, 1ನಿರ್ಜೀವ ಕ್ರಿಯೆಗಳಿಂದ ಮಾನಸಾಂತರವೂ, ದೇವರಲ್ಲಿ ನಂಬಿಕೆಯೂ, 2ದೀಕ್ಷಾಸ್ನಾನಗಳ ಬೋಧನೆಯೂ, 3ಹಸ್ತಾರ್ಪಣೆಯೂ, 4ಸತ್ತವರಿಗೆ ಪುನರುತ್ಥಾನವೂ ಮತ್ತು 5ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದರ ಕುರಿತು ಪದೇಪದೇ ಅಸ್ತಿವಾರವನ್ನೆ ಹಾಕುತಿರದೆ ನಾವು ಪರಿಪಕ್ವತೆಯೆಡೆಗೆ 6ಸಾಗೋಣ. ದೇವರು ಅನುಮತಿಸುವುದಾದರೆ ನಾವು ಇವುಗಳನ್ನು ಮಾಡುವೆವು. ಒಂದು ಸಾರಿ 7ಬೆಳಕಿನಲ್ಲಿ ಸೇರಿದವರು ಸ್ವರ್ಗೀಯ 8ದಾನವನ್ನು ಅನುಭವಿಸಿದವರು, 9ಪವಿತ್ರಾತ್ಮನಲ್ಲಿ ಪಾಲುಗಾರರಾದವರು, ದೇವರ ವಾಕ್ಯದ ಶ್ರೇಷ್ಠತೆಯನ್ನೂ ಮುಂದಣ ಯುಗದ ಶಕ್ತಿಯನ್ನೂ ಅನುಭವಿಸಿದವರು ಅದರಿಂದ ಹಿಂಜಾರಿಹೋದರೆ, 10ಅವರಲ್ಲಿ ತಿರುಗಿ ಮಾನಸಾಂತರವನ್ನು ಹುಟ್ಟಿಸುವುದು ಅಸಾಧ್ಯ, ಯಾಕೆಂದರೆ 11ಅವರು ತಾವಾಗಿಯೇ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗವಾಗಿ ಅವಮಾನಪಡಿಸುವವರೂ ಆಗಿರುತ್ತಾರೆ. ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ. 12ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ಅಯೋಗ್ಯವಾದದ್ದಾಗಿ ಶಾಪಕ್ಕೆ ಗುರಿಯಾಗುತ್ತದೆ. 13ಕೊನೆಗದು ಸುಡಲ್ಪಡುತ್ತದೆ. ಪ್ರಿಯರೇ, ಈ ರೀತಿಯಾಗಿ ನಾವು ಮಾತನಾಡಿದರೂ ನಿಮ್ಮ ವಿಷಯವಾಗಿಯೂ ರಕ್ಷಣೆಗೆ ಸಂಬಂಧಿಸಿದವುಗಳಲ್ಲಿಯೂ ನೀವು ಉತ್ತಮರಾಗಿದ್ದೀರೆಂದು ನಂಬಿದ್ದೇವೆ. 14ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು 15ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ. ನಿರೀಕ್ಷೆಯ ಸಂಪೂರ್ಣ ನಿಶ್ಚಯತ್ವವನ್ನು ಹೊಂದುವುದಕ್ಕಾಗಿ ಅಂತ್ಯದವರೆಗೂ ನೀವು ಅದೇ 16ಶ್ರದ್ಧೆಯನ್ನು ತೋರಿಸಬೇಕೆಂದು ನಾನು ಬಹಳವಾಗಿ ಅಪೇಕ್ಷಿಸುತ್ತೇವೆ. ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ 17ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.

ದೇವರ ವಾಗ್ದಾನಗಳು ಎಷ್ಟು ಮಾತ್ರಕ್ಕೂ ತಪ್ಪುವುದಿಲ್ಲ

ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತಲೂ ಹೆಚ್ಚಿನವರು ಯಾರೂ ಇಲ್ಲದ್ದರಿಂದ 18ತನ್ನ ಮೇಲೆ ಆಣೆಯಿಟ್ಟು, “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಅಭಿವೃದ್ಧಿಪಡಿಸುವೆನು” ಎಂದು ಹೇಳಿದನಷ್ಟೆ. ಹೀಗೆ 19ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು. ಮನುಷ್ಯರು ತಮಗಿಂತಲೂ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ, 20ಆಣೆಯನ್ನು ದೃಢಪಡಿಸಿದ ಮೇಲೆ ವಿವಾದವು ಅಂತ್ಯವಾಗುವುದು. ಹಾಗೆಯೇ ದೇವರು 21ತನ್ನ ಸಂಕಲ್ಪವು ಬದಲಾಗಲಾರದ್ದೆಂಬುದನ್ನು, 22ವಾಗ್ದಾನದ ಬಾಧ್ಯಸ್ಥರಿಗೆ ಬಹು ಸ್ಪಷ್ಟವಾಗಿ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದನು. ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, 23ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು. 24ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ವಿಶ್ವಾಸಾರ್ಹವಾದದ್ದೂ ಸ್ಥಿರವಾದದ್ದೂ ಆದ 25ಲಂಗರವಾಗಿದೆ. ಅದು ಅತಿ ಪರಿಶುದ್ಧ ಸ್ಥಳದ 26ತೆರೆಯ ಒಳಗಡೆ ಪ್ರವೇಶಿಸುವಂಥದ್ದಾಗಿದೆ. ಅಲ್ಲಿಗೆ 27ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ, 28ನಮಗೋಸ್ಕರ ಮುಂಚಿತವಾಗಿಯೇ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ.

Source notes (28)
  1. Footnote ಇಬ್ರಿ. 9:14:
  2. Footnote ಅ. ಕೃ. 19:4,5.
  3. Footnote ಅ. ಕೃ. 8:17; 19:6:
  4. Footnote ಅ. ಕೃ. 17:31, 32:
  5. Footnote ಅ. ಕೃ. 10:42; 17:31; 2 ಕೊರಿ 5:10:
  6. Footnote ಇಬ್ರಿ. 5:12; ಫಿಲಿ. 3:12-14:
  7. Footnote ಇಬ್ರಿ. 10:32:
  8. Footnote ಯೋಹಾ 4:10; ಎಫೆ 2:8:
  9. Footnote ಗಲಾ. 3:2, 5:
  10. Footnote 1 ಯೋಹಾ 5:16:
  11. Footnote ಇಬ್ರಿ. 10:29:
  12. Footnote ಯೆಶಾ 5:1-7; ಲೂಕ 13:6-9:
  13. Footnote ಮಲಾ. 4:1; ಯೋಹಾ 15:6:
  14. Footnote ರೋಮಾ. 15:31; 2 ಕೊರಿ 8:4; 9:1, 12; 2 ತಿಮೊ. 1:18; ಪ್ರಕ 2:19:
  15. Footnote ಜ್ಞಾ. 19:17; ಮತ್ತಾ 10:42; 25:40; ಮಾರ್ಕ 9:41:
  16. Footnote ರೋಮಾ. 5:2-5:
  17. Footnote ಇಬ್ರಿ. 13:7; ಇಬ್ರಿ. 10:36; 13:7:
  18. Footnote ಆದಿ 22:16, 17:
  19. Footnote ರೋಮಾ. 4:13:
  20. Footnote ವಿಮೋ 22:11:
  21. Footnote ವ. 18; ಕೀರ್ತ 110:4; ಜ್ಞಾ. 19:21:
  22. Footnote ಇಬ್ರಿ. 11:9:
  23. Footnote ಇಬ್ರಿ. 12:1,2.
  24. Footnote ತೀತ. 1:2:
  25. Footnote ಅಂದರೆ ಆಧಾರವಾಗಿರುವುದು.
  26. Footnote ಇಬ್ರಿ. 9:7; ಯಾಜ 16:15:
  27. Footnote ಇಬ್ರಿ. 3:1; 5:6, 10; 7:17, 21
  28. Footnote ಇಬ್ರಿ. 4:14; 8:1; 9:24:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.