ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಇಬ್ರಿ 5
ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ 1ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ 2ನೇಮಿಸಲಾಗಿದ್ದು. 3ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು. 4ತಾನೂ ಸಹ ಬಲಹೀನನಾಗಿರುವುದರಿಂದ 5ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು. ಆದ್ದರಿಂದ, 6ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು. 7ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ 8ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ. 9
ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ 10
“ನೀನು ನನ್ನ ಮಗನು,
ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು.
ಆತನು ಇನ್ನೊಂದು ಕಡೆಯಲ್ಲಿ,
“ನೀನು 11ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ.
ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, 12ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ 13ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, 14ಪ್ರಾರ್ಥನೆ ವಿಜ್ಞಾಪನೆಗಳನ್ನು 15ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. ಹೀಗೆ 16ಆತನು ಮಗನಾಗಿದ್ದರೂ ತಾನು 17ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ 18ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ 19ನಿತ್ಯ ರಕ್ಷಣೆಗೆ ಕಾರಣನಾದನು. ಅಲ್ಲದೆ ಆತನು 20ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು.
ನಂಬಿಕೆಯನ್ನು ತ್ಯಜಿಸುವುದರ ಕುರಿತು ಎಚ್ಚರಿಕೆ
ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ. ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ 21ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ 22ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ. ಹಾಲು ಕುಡಿಯುವವನು 23ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು 24ಪ್ರಾಯಸ್ಥರಿಗೋಸ್ಕರ, ಅಂದರೆ 25ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.
Source notes (25)
- Footnote ಇಬ್ರಿ. 2:17:
- Footnote ಇಬ್ರಿ. 8:3:
- Footnote ಇಬ್ರಿ. 8:3, 4; 9:9; 10:11:
- Footnote ಇಬ್ರಿ. 7:28:
- Footnote ಇಬ್ರಿ. 2:18; 4:15:
- Footnote ಯಾಜ 4:3; 9:7; 16:6; ಇಬ್ರಿ. 7:27; 9:7:
- Footnote ಅರಣ್ಯ 16:5, 40; 18:7; 2 ಪೂರ್ವ 26:18:
- Footnote ವಿಮೋ 28:1; 1ಪೂರ್ವ 23:13:
- Footnote ಯೋಹಾ 8:54:
- Footnote ಇಬ್ರಿ. 1:5
- Footnote ಕೀರ್ತ 110:4; ಇಬ್ರಿ. 7:17, 21:
- Footnote ಮಾರ್ಕ 14:36:
- Footnote ಕೀರ್ತ 22:1, 2; ಮತ್ತಾ 27:46, 50; ಮಾರ್ಕ 15:34, 37; ಲೂಕ 23:46:
- Footnote ಮತ್ತಾ 26:39, 44; ಮಾರ್ಕ 14:36, 39; ಲೂಕ 22:41, 44:
- Footnote ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು.
- Footnote ಇಬ್ರಿ. 1:2:
- Footnote ಫಿಲಿ. 2:8:
- Footnote ಇಬ್ರಿ. 2:10:
- Footnote ಯೆಶಾ 45:17:
- Footnote ಇಬ್ರಿ. 5:6; 6:20:
- Footnote ಇಬ್ರಿ. 6:1:
- Footnote 1 ಕೊರಿ 3:2:
- Footnote 1 ಕೊರಿ 3:1:
- Footnote ಎಫೆ 4:12, 13. ಇಬ್ರಿ. 6:1:
- Footnote ಆದಿ 3:22; 1 ಅರಸು. 3:9; ಯೆಶಾ 7:15:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.