Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಪೇತ್ರ 5

ದೇವರ ಮಂದೆಯ ಪೋಷಣೆ

ಸಭೆಯ ಹಿರಿಯರೇ, 1ಜೊತೆಹಿರಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು 2ಕಣ್ಣಾರೆ ಕಂಡವನೂ, ಇನ್ನು ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಪಾಲುಗಾರನೂ ಆಗಿದ್ದು ನಿಮ್ಮನ್ನು ಪ್ರೋತ್ಸಾಹಿಸಿ ಹೇಳುವುದೇನಂದರೆ, 3ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. 4ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, 5ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ. ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ 6ದೊರೆತನಮಾಡುವವರಂತೆ ನಡೆಯದೆ 7ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ. 8ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು 9ಎಂದಿಗೂ ಬಾಡದ ಮಹಿಮೆಯ 10ಕಿರೀಟವನ್ನು ಹೊಂದುವಿರಿ.

ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ 11ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “12ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು. 13ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ. 14ಸ್ವಸ್ಥಚಿತ್ತರಾಗಿರಿ 15ಎಚ್ಚರವಾಗಿರಿ. 16ನಿಮ್ಮ ವಿರೋಧಿಯಾಗಿರುವ ಸೈತಾನನು 17ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. 18ನೀವು ನಂಬಿಕೆಯಲ್ಲಿ ದೃಢವಾಗಿದ್ದು 19ಅವನನ್ನು ಎದುರಿಸಿರಿ. 20ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ. ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ 21ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು 22ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು 23ಸ್ಥಿರಪಡಿಸಿ ಬಲಪಡಿಸುವನು. 24ಆತನಿಗೆ ಅಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ಕಡೆ ವಂದನೆಗಳು

ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು 25ಸಂಕ್ಷೇಪವಾಗಿ ಬರೆದು, ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ 26ನಿಲ್ಲಿರಿ. ದೇವರು ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದಿಸುತ್ತದೆ. ನನ್ನ ಮಗನಾದ 27ಮಾರ್ಕನು ಸಹ ನಿಮ್ಮನ್ನು ವಂದಿಸುತ್ತಾನೆ. 28ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ 29ಸಮಾಧಾನವುಂಟಾಗಲಿ.

Source notes (29)
  1. Footnote 2 ಯೋಹಾ 1. 3 ಯೋಹಾ 1.
  2. Footnote ಲೂಕ 24:48; ಯೋಹಾ 15:27; ಅ. ಕೃ. 1:8, 22; 2:32; 3:15; 4:33; 5:32; 10:39, 41; 13:31; 1 ಕೊರಿ 15:15:
  3. Footnote ಯೋಹಾ 21:16; ಅ. ಕೃ. 20:28; ಪ್ರಕ 7:17:
  4. Footnote ಫಿಲೆ. 14:
  5. Footnote 1 ತಿಮೊ. 3:8; ತೀತ. 1:7:
  6. Footnote ಯೆಹೆ. 34:4; ಮತ್ತಾ 20:25; ಮಾರ್ಕ 10:42; 2 ಕೊರಿ 1:24:
  7. Footnote ಫಿಲಿ. 3:17; 2 ಥೆಸ. 3:9; 1 ತಿಮೊ. 4:12; ತೀತ. 2:7:
  8. Footnote ಇಬ್ರಿ. 13:20:
  9. Footnote 1 ಪೇತ್ರ. 1:4, 7; 4:13; 5:1, 10:
  10. Footnote 1 ಕೊರಿ 9:25; ಯಾಕೋಬ 1:12:
  11. Footnote ಮತ್ತಾ 20:26, 27; ಯೋಹಾ 13:4, 5, 14:
  12. Footnote ಯಾಕೋಬ 4:6, 10:
  13. Footnote ಕೀರ್ತ 37:5; 55:22; ಮತ್ತಾ 6:25:
  14. Footnote 1 ಪೇತ್ರ. 1:13:
  15. Footnote ಮತ್ತಾ 24:42; 25:13; 26:41; ಮಾರ್ಕ 14:34-38; ಲೂಕ 12:37; 21:36; ಅ. ಕೃ. 20:31; 1 ಕೊರಿ 16:13; 1 ಥೆಸ. 5:6:
  16. Footnote ಲೂಕ 22:31; ಎಫೆ 4:27; 6:11; 2 ಕೊರಿ 2:11; ಪ್ರಕ 12:9, 11. ಯೋಬ. 1:9-12:
  17. Footnote ಕೀರ್ತ 22:20:
  18. Footnote ಕೊಲೊ 2:5:
  19. Footnote ಯಾಕೋಬ 4:7:
  20. Footnote ಅ. ಕೃ. 14:22; 1 ಥೆಸ. 3:3; 2 ತಿಮೊ. 3:12:
  21. Footnote 1 ಕೊರಿ 1:9; 1 ಥೆಸ. 2:12; 1 ತಿಮೊ. 6:12:
  22. Footnote 1 ಪೇತ್ರ. 1:6:
  23. Footnote ಲೂಕ 22:32; ರೋಮಾ. 16:25; 1 ಥೆಸ. 3:2:
  24. Footnote 1 ಪೇತ್ರ. 4:11:
  25. Footnote ಇಬ್ರಿ. 13:22:
  26. Footnote 1 ಕೊರಿ 15:1:
  27. Footnote ಅ. ಕೃ. 12:12:
  28. Footnote ರೋಮಾ. 16:16:
  29. Footnote ಎಫೆ 6:23:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.