ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
1 ಪೇತ್ರ 4
ಪರಿವರ್ತನೆಗೊಂಡ ಜೀವಿತಗಳು
ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ 2ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ 3ಶರೀರದಲ್ಲಿ ಬಾಧೆಪಟ್ಟವನು 4ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ. ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ 5ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ 6ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ 7ಪ್ರಯತ್ನಮಾಡುವನು. ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ 8ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ 9ಕಾಲಕಳೆದದ್ದು ಸಾಕು. ಅವರು ಮಾಡುವ ಅಪರಿಮಿತವಾದ 10ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು 11ನಿಮ್ಮನ್ನು ದೂಷಿಸುತ್ತಾರೆ. ಅವರು 12ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು. ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. 13ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು 14ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
ದೇವರ ವರಗಳ ಒಳ್ಳೆಯ ನಿರ್ವಾಹಕನು
ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ 16ಪ್ರಾರ್ಥನೆಗೆ ಸಿದ್ಧವಾಗಿರುವಂತೆ 17ಸ್ವಸ್ಥಚಿತ್ತರಾಗಿಯೂ ಇರಿ. ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. 18ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ. ಗುಣಗುಟ್ಟದೆ ಒಬ್ಬರಿಗೊಬ್ಬರು 19ಅತಿಥಿ ಸತ್ಕಾರ ಮಾಡಿರಿ. ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ 20ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು 21ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ. ಒಬ್ಬನು ಬೋಧಿಸುವವನಾದರೆ 22ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ 23ದೇವರಿಗೆ ಸ್ತೋತ್ರ ಉಂಟಾಗುವುದು. 24ಯೇಸು ಕ್ರಿಸ್ತನಿಗೆ 25ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.
ಕ್ರೈಸ್ತನಾಗಿ ಬಾಧೆಯನ್ನನುಭವಿಸುವುದು
ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ 26ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ಆದರೆ 27ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ 28ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ 29ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. 30ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ. 31ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ 32ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು. ಆದರೆ 33ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
ನ್ಯಾಯವಿಚಾರಣೆಯ ಸಮಯ ಬಂದಿದೆ. 34ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. 35ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು? 36ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ? ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು 37ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.
Source notes (37)
- Footnote 1 ಪೇತ್ರ. 3:18:
- Footnote ಫಿಲಿ. 2:5; ಎಫೆ 6:13:
- Footnote ರೋಮಾ. 6:2,7; ಗಲಾ. 5:24; ಕೊಲೊ 3:3, 5:
- Footnote 2 ಪೇತ್ರ. 2:14
- Footnote 1 ಪೇತ್ರ. 1:14; ತೀತ. 2:12; 1 ಯೋಹಾ 2:16.
- Footnote ರೋಮಾ. 6:11:
- Footnote ರೋಮಾ. 6:14; 14:7; 2 ಕೊರಿ 5:15:
- Footnote ಎಫೆ 4:17-19; 1 ಥೆಸ. 4:5; 1 ಕೊರಿ 12:2:
- Footnote ಯೆಹೆ. 45:9; ಅ. ಕೃ. 17:30.
- Footnote ಎಫೆ 5:18:
- Footnote 1 ಪೇತ್ರ. 2:12; 3:16:
- Footnote ಅ. ಕೃ. 10:42; 2 ಕೊರಿ 5:10; ಯಾಕೋಬ 5:9:
- Footnote ಅಥವಾ, ಶರೀರವನ್ನು ಬಿಟ್ಟವರಾಗಿ.
- Footnote 1 ಪೇತ್ರ. 3:19:
- Footnote ಯಾಕೋಬ 5:8:
- Footnote ಮತ್ತಾ 26:41; ಲೂಕ 21:36:
- Footnote 1 ಪೇತ್ರ. 1:13:
- Footnote 1 ಕೊರಿ 13:5, 6; ಜ್ಞಾ. 10:12; 17:9:
- Footnote ಇಬ್ರಿ. 13:2; 1 ತಿಮೊ. 3:2; ತೀತ. 1:8:
- Footnote ಲೂಕ 12:42; 1 ಕೊರಿ 4:1, 2; ತೀತ. 1:7:
- Footnote ರೋಮಾ. 12:6, 7; 1 ಕೊರಿ 4:7; ಮತ್ತಾ 25:15:
- Footnote ಅ. ಕೃ. 7:38; ರೋಮಾ. 3:2; ಇಬ್ರಿ. 5:12:
- Footnote 1 ಕೊರಿ 10:31:
- Footnote ರೋಮಾ. 11:36:
- Footnote 1 ಪೇತ್ರ. 5:11; ಯೂದ. 25; ಪ್ರಕ 1:6; 5:13:
- Footnote 1 ಪೇತ್ರ. 1:7:
- Footnote ಫಿಲಿ. 3:10, 11; ಅ. ಕೃ. 5:41:
- Footnote 1 ಪೇತ್ರ. 1:5-7; 5:1; ರೋಮಾ. 8:17, 18; ಯೂದ. 24:
- Footnote ಮತ್ತಾ 5:11; ಯೋಹಾ 15:21; ಇಬ್ರಿ. 11:26:
- Footnote ಯೆಶಾ 11:2:
- Footnote 1 ಪೇತ್ರ. 2:19, 20; 3:14, 17:
- Footnote ಅಥವಾ, ನಿಕೃಷ್ಟ ಕಾರ್ಯಗಳನ್ನು ನಡಿಸುವವನು. ತಲೆಹಾಕುವವನು ಎಂಬುದರೊಂದಿಗೆ 1 ಥೆಸ. 4:11; 2 ಥೆಸ. 3:11; 1 ತಿಮೊ. 5:13:
- Footnote 1 ಪೇತ್ರ. 2:19, 20; 3:14, 17; ಅ. ಕೃ. 26:28:
- Footnote ಯೆರೆ 25:29; ಯೆಹೆ. 9:6; ಆಮೋ. 3:2; ರೋಮಾ. 2:9:
- Footnote ಲೂಕ 23:31:
- Footnote ಜ್ಞಾ. 11:31:
- Footnote ಕೀರ್ತ 31:5; ಲೂಕ 23:46; 2 ತಿಮೊ. 1:12:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.