Biblica® Open Kannada Contemporary Version 2022
ಕೀರ್ತನೆಗಳು 121
ಯಾತ್ರಾ ಗೀತೆ.
ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ;
ನನ್ನ ಸಹಾಯವು ಎಲ್ಲಿಂದ ಬರುವುದು?
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ
ಯೆಹೋವ ದೇವರಿಂದಲೇ ನನ್ನ ಸಹಾಯವು ಬರುತ್ತದೆ.
ದೇವರು ನಿಮ್ಮ ಪಾದಗಳನ್ನು ಕದಲಗೊಡಿಸುವುದಿಲ್ಲ;
ನಿಮ್ಮನ್ನು ಕಾಪಾಡುವ ದೇವರು ತೂಕಡಿಸುವುದೂ ಇಲ್ಲ.
ಇಗೋ, ಇಸ್ರಾಯೇಲನ್ನು ಕಾಪಾಡುವ ದೇವರು
ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ.
ಯೆಹೋವ ದೇವರು ನಿಮ್ಮನ್ನು ಕಾಪಾಡುವವರಾಗಿದ್ದಾರೆ;
ಯೆಹೋವ ದೇವರು ನಿಮ್ಮ ಬಲಗಡೆಯಲ್ಲಿ ನೆರಳಿನಂತೆ ಇದ್ದಾರೆ.
ಹಗಲಲ್ಲಿ ಸೂರ್ಯನೂ ನಿಮ್ಮನ್ನು ಹಾನಿಮಾಡುವುದಿಲ್ಲ.
ರಾತ್ರಿಯಲ್ಲಿ ಚಂದ್ರನೂ ನಿಮ್ಮನ್ನು ಬಾಧಿಸುವುದಿಲ್ಲ.
ಯೆಹೋವ ದೇವರು ಎಲ್ಲಾ ಕೇಡಿನಿಂದ ನಿಮ್ಮನ್ನು ಕಾಪಾಡುವರು,
ನಿಮ್ಮ ಪ್ರಾಣವನ್ನೂ ಕಾಪಾಡುವರು.
ಯೆಹೋವ ದೇವರು, ನೀವು ಹೋಗುವಾಗಲೂ ಬರುವಾಗಲೂ
ಇಂದಿಗೂ ಎಂದೆಂದಿಗೂ ನಿಮ್ಮನ್ನು ಕಾಪಾಡುವರು.
Biblica® Open Kannada Contemporary Version 2022. Copyright © Biblica, Inc. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-11-09.