Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 114
ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ,
ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ,
ಯೆಹೂದವು ದೇವರ ಪರಿಶುದ್ಧ ಸ್ಥಳವಾಯಿತು,
ಇಸ್ರಾಯೇಲು ದೇವರ ರಾಜ್ಯವಾಯಿತು.
ಸಮುದ್ರವು ನೋಡಿ ಓಡಿಹೋಯಿತು;
ಯೊರ್ದನ್ ನದಿ ಹಿಂದಿರುಗಿತು.
ಬೆಟ್ಟಗಳು ಟಗರುಗಳಂತೆ ಓಡಿತು,
ಗುಡ್ಡಗಳು ಕುರಿಮರಿಗಳಂತೆಯೂ ಓಡಾಡಿದವು.
ಸಮುದ್ರವೇ, ನಿನಗೆ ಏನಾಯಿತು? ಏಕೆ ಓಡಿ ಹೋಗುತ್ತೀ?
ಯೊರ್ದನ್ ನದಿಯೇ, ಏಕೆ ಹಿಂದಿರುಗುತ್ತೀ?
ಬೆಟ್ಟಗಳೇ, ಟಗರುಗಳ ಹಾಗೆಯೂ; ಚಿಕ್ಕಗುಡ್ಡಗಳೇ,
ನೀವು ಕುರಿಮರಿಗಳ ಹಾಗೆಯೂ ಹಾರಾಡುವುದೇಕೆ?
ಯೆಹೋವ ದೇವರ ಸನ್ನಿಧಿಯಲ್ಲಿಯೂ,
ಯಾಕೋಬಿನ ದೇವರ ಮುಂದೆಯೂ ಭೂಮಿಯೇ ನಡುಗು.
ದೇವರು ಬಂಡೆಯನ್ನು ನೀರಿನ ಕೆರೆಯಾಗಿಯೂ,
ಕಗ್ಗಲ್ಲನ್ನು ನೀರಿನ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.