Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 1
ಭಾಗ 1
ಕೀರ್ತನೆಗಳು 1–41
ದುಷ್ಟರ ಆಲೋಚನೆಯಂತೆ ನಡೆಯದೆ,
ಪಾಪಿಗಳ ಮಾರ್ಗದಲ್ಲಿ ನಿಲ್ಲದೆ,
ಅಪಹಾಸ್ಯಗಾರರ ಕೂಟದಲ್ಲಿ ಕೂತುಕೊಳ್ಳದೆ,
ಯೆಹೋವ ದೇವರ ನಿಯಮದಲ್ಲಿ ಆನಂದಿಸುತ್ತಾ,
ದೇವರ ನಿಯಮವನ್ನು ರಾತ್ರಿ ಹಗಲು ಧ್ಯಾನಿಸುತ್ತಾ ಬದುಕುವವರು ಧನ್ಯರು.
ಅಂಥವರು ನೀರಿನ ಕಾಲುವೆಗಳ ಬಳಿಯಲ್ಲಿ ನೆಟ್ಟಿರುವ, ಮರದ ಹಾಗಿರುವರು.
ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದೆ,
ಅದರ ಎಲೆ ಉದುರುವುದೇ ಇಲ್ಲ1.
ಅದರಂತೆ ಅವರು ಮಾಡುವ ಕಾರ್ಯವೆಲ್ಲವೂ ಸಫಲವಾಗುವುದು.
ಆದರೆ ದುಷ್ಟರು ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ
ಹೊಟ್ಟಿನ ಹಾಗೆಯೇ ಇದ್ದಾರೆ.
ಆದ್ದರಿಂದ ದುಷ್ಟರು ನ್ಯಾಯತೀರ್ಪಿಗೆ ಒಳಗಾಗುವರು,
ಪಾಪಿಗಳಿಗೆ ನೀತಿವಂತರ ಸಭೆಯಲ್ಲಿ ಸ್ಥಳವಿರುವುದಿಲ್ಲ.
ಯೆಹೋವ ದೇವರು ನೀತಿವಂತರ ಮಾರ್ಗವನ್ನು ಅರಿತಿದ್ದಾರೆ;
ಆದರೆ ದುಷ್ಟರ ಮಾರ್ಗವು ನಾಶಕ್ಕೆ ನಡೆಸುವುದು.
Source notes (1)
- Footnote ಎಲೆ ಉದುರುವುದೇ ಇಲ್ಲ ಪದದ ಅರ್ಥ ಯಾವಾಗಲೂ ಆರೋಗ್ಯವಾಗಿರುವ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.