Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಹೋಶೇಯ 3

ತನ್ನ ಪತ್ನಿಯೊಂದಿಗೆ ಹೋಶೇಯನ ಸಂಧಾನವಾದದ್ದು

ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು.

ಅಂತೆಯೇ ನಾನು ಅವಳನ್ನು ನನಗಾಗಿ ಹದಿನೈದು ಶೆಕೆಲ್ ಬೆಳ್ಳಿ1 ಮತ್ತು ಸುಮಾರು ಒಂದು ಹೋಮೆರ್ ಹಾಗೂ ಒಂದು ಲೆಥೆಕ2 ಜವೆಗೋಧಿಗೂ ಕೊಂಡುಕೊಂಡೆನು. ನಾನು ಅವಳಿಗೆ, “ನನ್ನೊಂದಿಗೆ ಬಹಳ ದಿವಸಗಳು ನನಗಾಗಿ ಇರಬೇಕು. ನೀನು ವ್ಯಭಿಚಾರವನ್ನು ಮಾಡಬಾರದು. ನೀನು ಬೇರೆ ಪುರುಷನಿಗಾಗಿ ಇರಬಾರದು. ಆಗ ನಿನ್ನೊಂದಿಗೆ ಇರುವೆನು,” ಎಂದು ಹೇಳಿದೆನು.

ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು. ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.

Source notes (2)
  1. Footnote ಸುಮಾರು 170 ಗ್ರಾಂ
  2. Footnote ಸುಮಾರು 195 ಕಿಲೋಗ್ರಾಂ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.