Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಆದಿಕಾಂಡ 36
ಏಸಾವನ ವಂಶಸ್ಥರು
ಎದೋಮ್ ಎಂಬ ಏಸಾವನ ವಂಶಾವಳಿ ಇದು:
ಏಸಾವನು ಕಾನಾನ್ಯರ ಪುತ್ರಿಯರನ್ನು ಅಂದರೆ, ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ, ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋದರಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಯೂವೇಲನನ್ನು ಹೆತ್ತಳು. ಒಹೊಲೀಬಾಮಳು ಯೆಯೂಷನನ್ನು, ಯಳಾಮನನ್ನು, ಕೋರಹ ಇವರನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಪುತ್ರರು.
ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಪುತ್ರಪುತ್ರಿಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು, ತನ್ನ ಸಹೋದರನಾದ ಯಾಕೋಬನ ಬಳಿಯಿಂದ ಸ್ವಲ್ಪ ದೂರವಿದ್ದ ಮತ್ತೊಂದು ಊರಿಗೆ ಹೋದನು. ಏಕೆಂದರೆ ಅವರ ಸಂಪತ್ತು ಅವರು ಕೂಡಿ ಇರುವುದಕ್ಕೆ ಆಗದಷ್ಟು ಅಭಿವೃದ್ಧಿಯಾಗಿತ್ತು. ಅವರ ಪಶುಪ್ರಾಣಿಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು. ಹೀಗೆ ಎದೋಮನು ಎಂಬ ಏಸಾವನು ಸೇಯೀರ್ ಪರ್ವತದಲ್ಲಿ ವಾಸವಾಗಿದ್ದನು.
ಸೇಯೀರ್ ಪರ್ವತದಲ್ಲಿರುವ ಎದೋಮ್ಯರ ತಂದೆ ಏಸಾವನ ವಂಶಾವಳಿಗಳು ಇವೇ:
ಏಸಾವನ ಪುತ್ರರ ಹೆಸರುಗಳು ಯಾವುವೆಂದರೆ:
ಏಸಾವನ ಹೆಂಡತಿಯಾಗಿರುವ ಆದಾ ಎಂಬಾಕೆಯ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿ ಬಾಸೆಮತಳ ಮಗ ರೆಯೂವೇಲನು.
ಎಲೀಫಜನ ಮಕ್ಕಳು ಯಾರೆಂದರೆ:
ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್. ತಿಮ್ನಾಳು ಏಸಾವನ ಮಗ ಎಲೀಫಜನಿಗೆ ಉಪಪತ್ನಿಯಾಗಿದ್ದು, ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾ ಎಂಬಾಕೆಯ ಪುತ್ರರು ಇವರೇ.
ರೆಯೂವೇಲನ ಮಕ್ಕಳು ಯಾರೆಂದರೆ:
ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ, ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀಬಾಮಳ ಪುತ್ರರು ಯಾರೆಂದರೆ: ಆಕೆಯು ಏಸಾವನಿಗೆ
ಯೆಯೂಷ್, ಯಳಾಮ್ ಹಾಗೂ ಕೋರಹ ಇವರನ್ನು ಹೆತ್ತಳು.
ಏಸಾವನ ಪುತ್ರರ ಮುಖಂಡರು ಯಾರೆಂದರೆ:
ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ
ತೇಮಾನ್, ಓಮಾರ್, ಚೆಫೋ, ಕೆನಜ್, ಕೋರಹ, ಗತಾಮ್, ಅಮಾಲೇಕ್, ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾ ಎಂಬಾಕೆಯ ಮೊಮ್ಮಕ್ಕಳು.
ಏಸಾವನ ಮಗ ರೆಯೂವೇಲನ ಪುತ್ರರು ಯಾರೆಂದರೆ:
ನಹತ್, ಜೆರಹ, ಶಮ್ಮಾ ಹಾಗೂ ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆವುಯೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
ಏಸಾವನ ಹೆಂಡತಿ ಒಹೊಲೀಬಾಮಳ ಪುತ್ರರು ಯಾರೆಂದರೆ:
ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. ಇವರು ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಿಂದ ಬಂದ ಮುಖಂಡರು.
ಇವರು ಎದೋಮ್ ಎಂಬ ಏಸಾವನ ಪುತ್ರರು. ಇವರು ಮುಖಂಡರಾಗಿದ್ದರು.
ದೇಶದಲ್ಲಿ ವಾಸಿಸುತ್ತಿದ್ದ ಹೋರಿಯನಾದ ಸೇಯೀರನ ಪುತ್ರರು ಯಾರೆಂದರೆ:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯೀರನ ಮಕ್ಕಳಾದ ಹೋರಿಯರ ಮುಖಂಡರು.
ಲೋಟಾನನ ಪುತ್ರರು ಯಾರೆಂದರೆ:
ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
ಶೋಬಾಲನ ಮಕ್ಕಳು ಯಾರೆಂದರೆ:
ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್.
ಸಿಬೆಯೋನನ ಮಕ್ಕಳು:
ಅಯ್ಯಾಹ ಮತ್ತು ಅನಾಹ ಎಂಬುವರು. ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಕಾಡಿನಲ್ಲಿ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೂ ಅರಣ್ಯದಲ್ಲಿ ಹೇಸರಗತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.
ಅನಾಹನ ಮಕ್ಕಳು ಯಾರೆಂದರೆ:
ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
ದೀಶೋನನ ಮಕ್ಕಳು ಯಾರೆಂದರೆ:
ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
ಏಚೆರನ ಮಕ್ಕಳು ಯಾರೆಂದರೆ:
ಬಿಲ್ಹಾನ್, ಜಾವಾನ್ ಮತ್ತು ಆಕಾನ್.
ದೀಶಾನನ ಮಕ್ಕಳು ಯಾರೆಂದರೆ:
ಊಚ್ ಮತ್ತು ಅರಾನ್.
ಹೋರಿಯರಿಂದ ಬಂದ ಮುಖಂಡರು ಯಾರೆಂದರೆ:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, ದೀಶೋನ್, ಏಚೆರ್, ದೀಶಾನ್.
ಹೋರಿಯರಿಂದ ಹುಟ್ಟಿದ ಸೇಯೀರ್ ದೇಶದಲ್ಲಿ ಮುಖಂಡರು ಇವರೇ.
ಎದೋಮಿನ ಅರಸರು
ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
ಅಕ್ಬೋರನ ಮಗ ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
ಕುಟುಂಬ, ಸ್ಥಳ, ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವುವೆಂದರೆ:
ತಿಮ್ನಾ, ಅಲ್ವಾ, ಯೆತೇತ,
ಒಹೊಲೀಬಾಮ, ಏಲಾ, ಪೀನೋನ್,
ಕೆನಜ್, ತೇಮಾನ್, ಮಿಬ್ಜಾರ,
ಮಗ್ದೀಯೇಲ್ ಮತ್ತು ಗೀರಾಮ್
ಇವರೇ ತಮ್ಮ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು.
ಎದೋಮ್ಯರ ತಂದೆ ಏಸಾವನು ವಂಶಾವಳಿ ಇದೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.