Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಎಜ್ರ 2
ಸೆರೆಯಿಂದ ತಿರುಗಿ ಬಂದವರ ಸಂಖ್ಯೆ
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ, ಬಾಬಿಲೋನಿಗೆ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಹಾಗೂ ಬಾಣ.
ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
ಪರೋಷನ ವಂಶಜರು 2,172
ಶೆಫಟ್ಯನ ವಂಶಜರು 372
ಆರಹನ ವಂಶಜರು 775
ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,812
ಏಲಾಮನ ವಂಶಜರು 1,254
ಜತ್ತೂವಿನ ವಂಶಜರು 945
ಜಕ್ಕೈನ ವಂಶಜರು 760
ಬಾನೀಯ ವಂಶಜರು 642
ಬೇಬೈನ ವಂಶಜರು 623
ಅಜ್ಗಾದನ ವಂಶಜರು 1,222
ಅದೋನೀಕಾಮಿನ ವಂಶಜರು 666
ಬಿಗ್ವೈ ವಂಶಜರು 2,056
ಅದೀನನ ವಂಶಜರು 454
ಹಿಜ್ಕೀಯನ ಮಗನಾದ ಆಟೇರ್ ವಂಶಜರು 98
ಬೇಚೈಯ ವಂಶಜರು 323
ಯೋರನ ವಂಶಜರು 112
ಹಾಷುಮನ ವಂಶಜರು 223
ಗಿಬ್ಬಾರನ ವಂಶಜರು 95
ಬೇತ್ಲೆಹೇಮನ ವಂಶಜರು 123
ನೆಟೋಫದ ಜನರು 56
ಅನಾತೋತ್ ಊರಿನವರು 128
ಅಜ್ಮಾವೆತಿನವರು 42
ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743
ರಾಮಾ ಗೆಬ ಎಂಬ ಪಟ್ಟಣದವರು 621
ಮಿಕ್ಮಾಷದ ಜನರು 122
ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 223
ನೆಬೋ ಊರಿನವರು 52
ಮಗ್ಬೀಷನ ಜನರು 156
ಮತ್ತೊಬ್ಬ ಏಲಾಮನ ವಂಶಜರು 1,254
ಹಾರಿಮನ ವಂಶಜರು 320
ಲೋದ್, ಹಾದೀದ್, ಓನೋ ಎಂಬ ಊರಿನ ಜನರು 725
ಯೆರಿಕೋವಿನ ವಂಶಜರು 345
ಸೆನಾಹನ ವಂಶಜರು 3,630.
ಯಾಜಕರು:
ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973
ಇಮ್ಮೇರನ ವಂಶಜರು 1,052
ಪಷ್ಹೂರನ ವಂಶಜರು 1,247
ಹಾರಿಮನ ವಂಶಜರು 1,017.
ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
ಹಾಡುಗಾರರು: ಆಸಾಫನ ವಂಶಜರು 128.
ದೇವಾಲಯದ ದ್ವಾರಪಾಲಕರಾದ ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು ಒಟ್ಟು 139.
ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್ ಇವರ ವಂಶಜರು.
ಕೆರೋಸ್, ಸೀಯಹಾ, ಪದೋನ್,
ಲೆಬಾನ, ಹಗಾಬ, ಅಕ್ಕೂಬ್
ಹಗಾಬ್, ಶಲ್ಮೈ, ಹಾನಾನ್,
ಗಿದ್ದೇಲ್, ಗಹರ್, ರೆವಾಯ,
ರೆಚೀನ್, ನೆಕೋದ, ಗಜ್ಜಾಮ್,
ಉಜ್ಜ, ಪಾಸೇಹ, ಬೇಸೈ,
ಅಸ್ನ, ಮೆಯನೀಮ್, ನೆಫೀಸೀಮ್,
ಬಕ್ಬೂಕ್, ಹಕ್ಕೂಫ, ಹರ್ಹೂರ್,
ಬಚ್ಲೂತ್, ಮೆಹೀದ, ಹರ್ಷ,
ಬರ್ಕೋಸ್, ಸೀಸೆರ, ತೆಮಹ,
ನೆಚೀಹ, ಹಟೀಫ, ಇವರ ವಂಶಜರು.
ಸೊಲೊಮೋನನ ಸೇವಕರ ವಂಶಜರು: ಸೋಟೈ, ಹಸ್ಸೋಫೆರೆತ್, ಪೆರೂದ,
ಯಾಲ, ದರ್ಕೋನ್, ಗಿದ್ದೇಲ್,
ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಮತ್ತು ಆಮೀ ಇವರ ವಂಶಜರು.
ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 652 ಮಂದಿ.
ಯಾಜಕರಲ್ಲಿ:
ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು.
ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ, ಅವನ ಹೆಸರನ್ನು ಇಟ್ಟುಕೊಂಡಿದ್ದನು.
ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು. ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
ಹೀಗೆ ಹಿಂದಿರುಗಿ ಬಂದು, ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360. ಅವರ ಹೊರತಾಗಿ ಅವರ ದಾಸರೂ, ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 200 ಮಂದಿ ಇದ್ದರು. ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು, ಅವರ 435 ಒಂಟೆಗಳು, ಅವರ ಒಟ್ಟು 6,720 ಕತ್ತೆಗಳು.
ಅವರು ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಬಂದ ತರುವಾಯ, ಕುಟುಂಬಗಳ ಕೆಲವು ಮುಖ್ಯಸ್ಥರು ದೇವರ ಆಲಯವನ್ನು ಅದರ ಸ್ಥಳದಲ್ಲಿ ಕಟ್ಟುವುದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸಕ್ಕಾಗಿ ಬೊಕ್ಕಸಕ್ಕೆ 400 ಕಿಲೋಗ್ರಾಂ ಬಂಗಾರವನ್ನೂ, 2,800 ಕಿಲೋಗ್ರಾಂ ಬೆಳ್ಳಿಯನ್ನೂ, ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.
ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಉಳಿದ ಇಸ್ರಾಯೇಲರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.