Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
1 ಪೂರ್ವಕಾಲ ವೃತ್ತಾಂತ 8
ಬೆನ್ಯಾಮೀನ್ಯನಾದ ಸೌಲನ ವಂಶಾವಳಿ
ಬೆನ್ಯಾಮೀನನ ಮಕ್ಕಳು:
ಚೊಚ್ಚಲಮಗನಾದ ಬೆಳನನ್ನೂ,
ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,
ನಾಲ್ಕನೆಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
ಬೆಳನ ಪುತ್ರರು:
ಅದ್ದಾರ್, ಗೇರ, ಅಬೀಹೂದ್, ಅಬೀಷೂವನು, ನಾಮಾನನು, ಅಹೋಹನು, ಗೇರನು, ಶೆಫುಫಾನನು, ಹೂರಾಮನು.
ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.
ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.
ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ, ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹುಷೀಮಳೂ, ಬಾರಳೂ ಅವನಿಗೆ ಪತ್ನಿಯರಾಗಿದ್ದರು. ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಮಕ್ಕಳಾದ ಇವರು ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಹುಷೀಮಳಿಂದ ಅವನು ಅಬಿಟೂಬನನ್ನೂ, ಎಲ್ಪಾಲನನ್ನೂ ಪಡೆದನು.
ಎಲ್ಪಾಲನ ಪುತ್ರರು:
ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು. ಇದಲ್ಲದೆ ಅವನು ಗತ್ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಕುಟುಂಬಗಳಲ್ಲಿ ಬೆರೀಯ, ಶಮ ಯಜಮಾನರಾಗಿದ್ದರು.
ಅಹಿಯೋ, ಶಾಷಕ್, ಯೆರೀಮೋತ್, ಜೆಬದ್ಯ, ಅರಾದ್, ಏದೆರ್, ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಪುತ್ರರು.
ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್, ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರು ಎಲ್ಪಾಲನ ಪುತ್ರರು.
ಶಿಮ್ಮಿಯ ಕುಮಾರರು: ಯಾಕೀಮ್, ಜಿಕ್ರಿ, ಜಬ್ದೀ, ಎಲೀಯೆನೈ, ಚಿಲ್ಲೆತೈ, ಎಲೀಯೇಲ್, ಅದಾಯಾ, ಬೆರಾಯ, ಶಿಮ್ರಾತ್.
ಶಾಷಕನ ಪುತ್ರರು: ಇಷ್ಪಾನ್, ಏಬೆರ್, ಎಲೀಯೇಲ್, ಅಬ್ದೋನ್, ಜಿಕ್ರಿಯು, ಹಾನಾನ್, ಹನನ್ಯ, ಏಲಾಮ್, ಅನೆತೋತೀಯ, ಇಫ್ದೆಯಾಹ, ಪೆನೂಯೇಲ್.
ಶಂಷೆರೈ, ಶೆಹರ್ಯ, ಅತಲ್ಯ, ಯಾರೆಷ್ಯ, ಎಲೀಯ, ಜಿಕ್ರಿ ಇವರು ಯೆರೋಹಾಮನ ಪುತ್ರರು.
ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು.
ಅವನ ಹೆಂಡತಿಯ ಹೆಸರು ಮಾಕಳು. ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು, ಗೆದೋರನು, ಅಹಿಯೋನು, ಜೆಕೆರನು. ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ1 ಎಂಬವರು.
ಯೋನಾತಾನನ ಮಗನು ಮೆರೀಬ್ಬಾಳನು2;
ಮೆರೀಬ್ಬಾಳನು ಮೀಕನನ್ನು ಪಡೆದನು.
ಮೀಕನ ಪುತ್ರರು:
ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.
ಆಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು, ಜಿಮ್ರಿಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಅವನ ಮಗನು ರಾಫನು. ಅವನ ಮಗನು ಎಲ್ಲಾಸನು. ಅವನ ಮಗನು ಆಚೇಲನು.
ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು. ಅವರ ಹೆಸರುಗಳು
ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು, ಇವರೆಲ್ಲರು ಆಚೇಲನ ಪುತ್ರರು.
ಅವನ ಸಹೋದರನಾದ ಏಷೆಕನ ಪುತ್ರರು:
ಅವನ ಚೊಚ್ಚಲಮಗನಾದ ಉಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವನಾದ ಎಲೀಫೆಲೆಟನು. ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು.
ಇವರೆಲ್ಲರೂ ಬೆನ್ಯಾಮೀನನ ವಂಶಜರು.
Source notes (2)
- Footnote ಎಷ್ಬಾಳ ಇನ್ನೊಂದು ಹೆಸರು ಬೊಶೆತ್
- Footnote ಮೆರೀಬ್ಬಾಳ ಇನ್ನೊಂದು ಹೆಸರು ಮೆಫಿಲಬೊಶೆತ್
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.