Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
1 ಪೂರ್ವಕಾಲ ವೃತ್ತಾಂತ 3
ದಾವೀದನ ಪುತ್ರರು
ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ:
ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
ಕರ್ಮೇಲ್ಯಳಾದ ಅಬೀಗೈಲಳಿಂದ ಹುಟ್ಟಿದ ಎರಡನೆಯವನಾದ ದಾನಿಯೇಲನು,
ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು,
ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು.
ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು,
ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು.
ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು.
ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು:
ದಾವೀದನ ಹೆಂಡತಿ ಬತ್ಷೆಬೆಳು1 ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.
ಇದಲ್ಲದೆ ಇಬ್ಹಾರ್, ಎಲೀಷಾಮ2, ಎಲೀಫೆಲೆಟ್, ನೋಗಹ, ನೆಫೆಗ್, ಯಾಫೀಯ, ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಈ ಒಂಬತ್ತು ಮಂದಿ ಮಕ್ಕಳಿದ್ದರು.
ಉಪಪತ್ನಿಗಳ ಮಕ್ಕಳು ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು; ತಾಮಾರಳು ಇವರ ಸಹೋದರಿಯಾಗಿದ್ದಳು.
ಯೆಹೂದ್ಯರ ಅರಸರು
ಸೊಲೊಮೋನನ ಮಗನು ರೆಹಬ್ಬಾಮನು;
ಇವನ ಮಗನು ಅಬೀಯನು;
ಇವನ ಮಗನು ಆಸನು;
ಇವನ ಮಗನು ಯೆಹೋಷಾಫಾಟನು;
ಇವನ ಮಗನು ಯೆಹೋರಾಮನು;
ಇವನ ಮಗನು ಅಹಜ್ಯನು;
ಇವನ ಮಗನು ಯೋವಾಷನು.
ಇವನ ಮಗನು ಅಮಚ್ಯನು;
ಇವನ ಮಗನು ಅಜರ್ಯನು;
ಇವನ ಮಗನು ಯೋತಾಮನು.
ಇವನ ಮಗನು ಆಹಾಜನು;
ಇವನ ಮಗನು ಹಿಜ್ಕೀಯನು;
ಇವನ ಮಗನು ಮನಸ್ಸೆಯು.
ಇವನ ಮಗನು ಆಮೋನನು;
ಇವನ ಮಗನು ಯೋಷೀಯನು.
ಯೋಷೀಯನ ಮಕ್ಕಳು:
ಚೊಚ್ಚಲಮಗನಾದ ಯೋಹಾನಾನ್,
ಎರಡನೆಯವನಾದ ಯೆಹೋಯಾಕೀಮ್,
ಮೂರನೆಯವನಾದ ಚಿದ್ಕೀಯ,
ನಾಲ್ಕನೆಯವನಾದ ಶಲ್ಲೂಮ್.
ಯೆಹೋಯಾಕೀಮನ ಮಕ್ಕಳು:
ಇವನ ಮಗನಾದ ಯೆಕೊನ್ಯ;
ಇವನ ಮಗನು ಚಿದ್ಕೀಯ.
ಸೆರೆಯ ನಂತರದ ರಾಜವಂಶಸ್ಥರು
ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು:
ಇವನ ಮಗ ಶೆಯಲ್ತಿಯೇಲ್, ಮಲ್ಕೀರಾಮ, ಪೆದಾಯ್, ಶೆನಚ್ಚರ, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.
ಪೆದಾಯನ ಮಕ್ಕಳು:
ಜೆರುಬ್ಬಾಬೆಲನು, ಶಿಮ್ಮೀ.
ಜೆರುಬ್ಬಾಬೆಲನ ಮಕ್ಕಳು:
ಮೆಷುಲ್ಲಾಮನು, ಹನನ್ಯನು. ಇವರ ಸಹೋದರಿಯಾದ ಶೆಲೋಮೀತಳು. ಇವರಲ್ಲದೆ ಐವರು ಗಂಡು ಮಕ್ಕಳು ಅವನಿಗಿದ್ದರು: ಹಷುಬನು, ಓಹೆಲನು, ಬೆರೆಕ್ಯನು, ಹಸದ್ಯ, ಯೂಷಬ್ಹೆಸೆದ್
ಹನನ್ಯನ ವಂಶಜರು:
ಪೆಲಟ್ಯನು, ಯೆಶಾಯನು; ರೆಫಾಯನ ಮಕ್ಕಳು, ಅರ್ನಾನನ ಮಕ್ಕಳು, ಓಬದ್ಯನ ಮಕ್ಕಳು, ಶೆಕನ್ಯನ ಮಕ್ಕಳು.
ಶೆಕನ್ಯನ ವಂಶಜರು:
ಶೆಮಾಯನ ಮತ್ತು ಅವನ ಮಕ್ಕಳು ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಫಾಟ್, ಈ ಆರು ಮಂದಿಯು.
ನೆಯರ್ಯನ ಮಕ್ಕಳು:
ಎಲ್ಯೋವೇನೈನು, ಹಿಜ್ಕೀಯನು, ಅಜ್ರೀಕಾಮನು, ಈ ಮೂರು ಮಂದಿಯು.
ಎಲ್ಯೋವೇನೈನ ಮಕ್ಕಳು:
ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬ ಏಳುಮಂದಿ.
Source notes (2)
- Footnote ಬತ್ಷೆಬೆಳು ಹೀಬ್ರೂ ಭಾಷೆಯಲ್ಲಿ ಬತ್ಷೂವ
- Footnote ಎಲೀಷಾಮ ಅಥವಾ ಎಲೀಷೂವ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.