Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 6

ಏಳು ಮುದ್ರೆಗಳು

ಕುರಿಮರಿಯಾದಾತನು 1ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು 2ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು 3ಗುಡುಗಿನಂತಿದ್ದ ಸ್ವರದಿಂದ 4“ಬಾ!” ಎಂದು ಹೇಳುವುದನ್ನು ಕೇಳಿದೆನು. ನಾನು ನೋಡಲು ಇಗೋ 5ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು 6ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು 7ಕಿರೀಟವು ಕೊಡಲ್ಪಟ್ಟಿತು. ಅವನು 8ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.

ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ 9ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ 10ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.

ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ 11ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು. ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. 12ಒಂದು 13“ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು.

ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು. ಆಗ ನಾನು ನೋಡಲು ಇಗೋ, 14ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು 15ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.

ಆತನು ಐದನೆಯ ಮುದ್ರೆಯನ್ನು ಒಡೆದಾಗ, 16ದೇವರ ವಾಕ್ಯದ ನಿಮಿತ್ತವಾಗಿಯೂ, 17ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, 18ಹತರಾದವರ ಆತ್ಮಗಳು 19ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. ಅವರು, “ಸರ್ವಶಕ್ತನಾದ ಕರ್ತನೇ, 20ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ 21ಭೂಲೋಕ ನಿವಾಸಿಗಳಿಗೆ ನೀನು 22ಇನ್ನೆಷ್ಟು ಸಮಯ 23ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು. ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು 24ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು 25ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ 26ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.

ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ 27ಮಹಾಭೂಕಂಪ ಉಂಟಾಯಿತು. 28ಸೂರ್ಯನು 29ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು. 30ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ 31ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು. ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು 32ಮರೆಯಾಯಿತು. 33ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು. ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ 34ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು. 35ಬೆಟ್ಟಗಳಿಗೂ ಬಂಡೆಗಳಿಗೂ, “ನಮ್ಮ ಮೇಲೆ ಬೀಳಿರಿ!, 36ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ. ಏಕೆಂದರೆ ಅವರ 37ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, 38ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು.

Source notes (38)
  1. Footnote ಪ್ರಕ 5:1, 5-7:
  2. Footnote ಪ್ರಕ 4:7:
  3. Footnote ಪ್ರಕ 14:2; 19:6:
  4. Footnote ಅಥವಾ ಹೊರಟು ಬಾ; ಪ್ರಕ 22:20:
  5. Footnote ಜೆಕ. 1:8; 6:1-8; ಪ್ರಕ 19:11, 19, 21:
  6. Footnote ಕೀರ್ತ 45:4, 5; ಹಬ 3:8, 9; ಜೆಕ. 9:13, 14:
  7. Footnote ಪ್ರಕ 14:14:
  8. Footnote ಪ್ರಕ 3:21:
  9. Footnote ಜೆಕ. 1:8; 6:2:
  10. Footnote ಮತ್ತಾ 10:34; 24:6, 7.
  11. Footnote ಜೆಕ. 6:2:
  12. Footnote ಯಾಜ 26:26; 2 ಅರಸು. 7:1.
  13. Footnote ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ.
  14. Footnote ನಸು ಹಸಿರು ಹಾಗು ಬೂದಿ ಮಿಶ್ರಿತ ಬಣ್ಣವನ್ನು ಹೆಣ ಅಥವಾ ಶವಗಳ ಬಣ್ಣವೆಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ. ಜೆಕ. 6:2.
  15. Footnote ಯೆಹೆ. 14:21.
  16. Footnote ಪ್ರಕ 1:9.
  17. Footnote ಪ್ರಕ 1:2.
  18. Footnote ಪ್ರಕ 20:4.
  19. Footnote ಪ್ರಕ 14:18; 16:7
  20. Footnote ಪ್ರಕ 3:7.
  21. Footnote ಪ್ರಕ 3:10.
  22. Footnote ಕೀರ್ತ 94:3; ಜೆಕ. 1:12
  23. Footnote ಕೀರ್ತ 79:10; 119:84; ಲೂಕ 18:7, 8:
  24. Footnote ಪ್ರಕ 3:4; 7:9:
  25. Footnote ಪ್ರಕ 14:13:
  26. Footnote ಇಬ್ರಿ. 11:40.
  27. Footnote ಪ್ರಕ 11:13; 16:18:
  28. Footnote ಯೆಶಾ 13:10; 24:23
  29. Footnote ಯೆಶಾ 50. 3:
  30. Footnote ಯೆಶಾ 34:4:
  31. Footnote ಯೋವೇ. 3:15; ಮತ್ತಾ 24:29:
  32. Footnote ಪ್ರಕ 20:11; 21:1:
  33. Footnote ಪ್ರಕ 16:20; ಯೆಹೆ. 38:20:
  34. Footnote ಯೆಶಾ 2:19, 21:
  35. Footnote ಹೋಶೇ. 10:8; ಲೂಕ 23:30.
  36. Footnote ಪ್ರಕ 4:2:
  37. Footnote ಯೆರೆ 30. 7; ಯೋವೇ. 2:11, 31; ಚೆಫ. 1:14:
  38. Footnote ಎಜ್ರ. 9:15; ಕೀರ್ತ 76:7; ಮಲಾ. 3:2; ಲೂಕ 21:36:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.