Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 22

ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ 1ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. 2ಆ ನದಿಯ ಎರಡು ದಡಗಳಲ್ಲಿ 3ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ 4ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. 5ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. 6ಇನ್ನೂ ಯಾವ ಶಾಪವು ಇರುವುದಿಲ್ಲ. 7ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. 8ಆತನ ಸೇವಕರು ಆತನಿಗೆ ಸೇವೆ ಮಾಡುವರು. 9ಅವರು ಆತನ ಮುಖವನ್ನು ನೋಡುವರು. 10ಅವರ ಹಣೆಯ ಮೇಲೆ ಆತನ ಹೆಸರು ಇರುವುದು. ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ 11ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. 12ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

ಯೇಸುವಿನ ಪುನರಾಗಮನ

ಆ ಮೇಲೆ ದೇವದೂತನು ನನಗೆ, 13“ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ 14ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.

“ಇಗೋ ನೋಡು! ನಾನು 15ಅತಿಬೇಗನೆ ಬರುತ್ತೇನೆ! 16ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು” ಎಂದು ಹೇಳಿದನು. 17

ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು. ಆದರೆ 18ಅವನು ನನಗೆ, “ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, 19ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು” ಎಂದು ಹೇಳಿದನು. ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ 20“ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ. 21ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.”

“ನೋಡು! ನಾನು ಬೇಗನೇ ಬರುತ್ತೇನೆ. 22ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ 23ಪ್ರತಿಫಲವು ನನ್ನಲ್ಲಿದೆ. ನಾನೇ 24ಆದಿಯೂ, ಅಂತ್ಯವೂ, 25ಮೊದಲನೆಯವನೂ, ಕಡೆಯವನೂ, 26ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. 27

“ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ 28ಜೀವವೃಕ್ಷದ ಹಕ್ಕು ಇರುವುದು. 29ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು. ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ 30ಹೊರಗಿರುವರು” ಎಂದು ಹೇಳಿದನು.

“ಯೇಸುವೆಂಬ ನಾನು 31ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ 32ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು 33ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ 34ಅವನ ಸಂತತಿಯೂ 35ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.”

ಆತ್ಮನು ಮತ್ತು 36ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, 37ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

ಸಮಾಪ್ತಿ

ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, 38ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು. ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ 39ಪರಿಶುದ್ಧ ಪಟ್ಟಣದಲ್ಲಿಯೂ 40ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.

ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, “ಹೌದು ನಾನು ನಿಜವಾಗಿ 41ಬೇಗನೇ ಬರುತ್ತೇನೆ!” ಎಂದು ಹೇಳುತ್ತಾನೆ. ಆಮೆನ್. 42ಕರ್ತನಾದ ಯೇಸುವೇ ಬಾ.

ಕರ್ತನಾದ ಯೇಸುವಿನ ಕೃಪೆಯು 43ಎಲ್ಲರೊಂದಿಗೆ ಇರಲಿ. ಆಮೆನ್!

Source notes (43)
  1. Footnote ಯೆಹೆ. 47:1-12; ಜೆಕ. 14:8:
  2. Footnote ಯೆಹೆ. 47:12:
  3. Footnote ಆದಿ 2:9; ಪ್ರಕ 22:14, 19; 2:7:
  4. Footnote ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:
  5. Footnote ಪ್ರಕ 21:24:
  6. Footnote ಯೆಹೆ. 14:11; ಆದಿ 3:17:
  7. Footnote ಯೆಹೆ. 48:35; ಪ್ರಕ 21:3, 23:
  8. Footnote ಪ್ರಕ 7:15:
  9. Footnote ಮತ್ತಾ 5:8; 1 ಕೊರಿ 13:12; 1 ಯೋಹಾ 3:2:
  10. Footnote ಪ್ರಕ 3:12; 7:3; 14:1:
  11. Footnote ಕೀರ್ತ 36:9; ಪ್ರಕ 21:11, 23-25:
  12. Footnote ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ 20:4:
  13. Footnote ಪ್ರಕ 21:5
  14. Footnote ಪ್ರಕ 1:1:
  15. Footnote ಪ್ರಕ 3:11; 22:12, 20:
  16. Footnote ಪ್ರಕ 1:3.
  17. Footnote ಪ್ರಕ 1:1; 4:9:
  18. Footnote ಪ್ರಕ 9:10
  19. Footnote ಪ್ರಕ 1:3:
  20. Footnote ಮೂಲ: ವಾಕ್ಯಗಳನ್ನು ಗುಪ್ತವಾಗಿಡಬೇಡ.
  21. Footnote ಯೆಹೆ. 3 27; ದಾನಿ. 12:10; 2 ತಿಮೊ. 3:13:
  22. Footnote ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:
  23. Footnote ಯೆಶಾ 40. 10; 62:11:
  24. Footnote ಪ್ರಕ 1:8:
  25. Footnote ಪ್ರಕ 1:17; 1:4:
  26. Footnote ಪ್ರಕ 21:6:
  27. Footnote ಪ್ರಕ 7:14
  28. Footnote ಪ್ರಕ 22:2, 19:
  29. Footnote ಕೀರ್ತ 118:20; ಪ್ರಕ 21:27:
  30. Footnote ಮತ್ತಾ 8:12; ಗಲಾ. 5:19-21; ಪ್ರಕ 21:8:
  31. Footnote ಪ್ರಕ 1:4:
  32. Footnote ಪ್ರಕ 1:1:
  33. Footnote ಪ್ರಕ 5:5:
  34. Footnote 2 ಸಮು 7:12-16; ಯೆಶಾ 11:1; ರೋಮಾ. 1:3:
  35. Footnote ಅರಣ್ಯ 24:17; ಯೆಶಾ 60. 3; ಮತ್ತಾ 2:2; ಪ್ರಕ 2:28:
  36. Footnote ಪ್ರಕ 21:2, 9:
  37. Footnote ಯೆಶಾ 55:1; ಯೋಹಾ 7:37; ಪ್ರಕ 21:6:
  38. Footnote ಧರ್ಮೋ 4:2; 12:32; ಜ್ಞಾ. 30. 6:
  39. Footnote ಪ್ರಕ 21:2:
  40. Footnote ಪ್ರಕ 22:2, 14:
  41. Footnote ಪ್ರಕ 22:7,12:
  42. Footnote 2 ತಿಮೊ. 4:8:
  43. Footnote ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.