Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಪ್ರಕ 11

ದೇವರ ಇಬ್ಬರು ಸಾಕ್ಷಿಗಳು

ತರುವಾಯ 1ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. 2ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, 3ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು 4ನಲವತ್ತೆರಡು ತಿಂಗಳು ತುಳಿದಾಡುವರು. ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು 5ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.” ಭೂಲೋಕದ ಒಡೆಯನ ಮುಂದೆ ನಿಂತಿರುವ 6ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ 7ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು 8ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. 9ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ 10ನೀರು ರಕ್ತವಾಗುವಂತೆ ಮಾಡುವುದಕ್ಕೂ 11ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.

ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, 12ಅಧೋಲೋಕದಿಂದ ಬರುವ 13ಮೃಗವು 14ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. ಈ ಸಾಕ್ಷಿಗಳ ಶವಗಳು 15ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ 16ಸೊದೋಮ್ ಎಂದು, 17ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ 18ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. ಈ ಇಬ್ಬರು ಪ್ರವಾದಿಗಳು 19ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು 20ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, 21ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. ಅನಂತರ ಅವರಿಗೆ, 22“ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು 23ಮೇಘದಲ್ಲಿ 24ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. ಅದೇ ಗಳಿಗೆಯಲ್ಲಿ 25ಮಹಾ ಭೂಕಂಪವುಂಟಾಗಿ 26ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ 27ಪರಲೋಕದ ದೇವರನ್ನು 28ಘನಪಡಿಸಿದರು. 29

ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.

ಏಳನೆಯ ತುತ್ತೂರಿ

ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ 30ಮಹಾಶಬ್ದಗಳುಂಟಾಗಿ, 31“ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ 32ಆತನ ಕ್ರಿಸ್ತನಿಗೂ ಬಂದಿದೆ, 33ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು.

ತರುವಾಯ 34ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ 35ಅಡ್ಡಬಿದ್ದು,

“ಕರ್ತನೇ, ಸರ್ವಶಕ್ತನಾದ ದೇವರೇ, 36ಇರುವಾತನೇ ಇದ್ದಾತನೇ, 37

ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ

ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.

ಜನಾಂಗಗಳು ಕೋಪಿಸಿಕೊಂಡವು. 38

ನಿನ್ನ ಕೋಪವೂ ಪ್ರಕಟವಾಯಿತು. 39

ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ.

ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ, 40

ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ

ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ 41ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ”

ಎಂದು ಆತನನ್ನು ಆರಾಧಿಸಿದರು. 42

ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. 43ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, 44ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

Source notes (44)
  1. Footnote ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16:
  2. Footnote ಯೆಹೆ. 40. 17, 20:
  3. Footnote ಲೂಕ 21:24:
  4. Footnote ಪ್ರಕ 12:6; 13:5:
  5. Footnote ಯೆಶಾ 20:2:
  6. Footnote ಜೆಕ. 4:3, 11, 14:
  7. Footnote 2 ಅರಸು. 1:10, 12; ಯೆರೆ 5:14:
  8. Footnote ಅರಣ್ಯ 16:29, 35:
  9. Footnote ಅರಣ್ಯ 17:1; ಲೂಕ 4:25; ಯಾಕೋಬ. 5:17:
  10. Footnote ವಿಮೋ 7:19:
  11. Footnote ವಿಮೋ 7-10; 1 ಸಮು 4:8:
  12. Footnote ಪ್ರಕ 9:1:
  13. Footnote ಪ್ರಕ 17:8; ಪ್ರಕ 13:1:
  14. Footnote ದಾನಿ. 7:21:
  15. Footnote ಪ್ರಕ 16:19; 17:18; 18:10:
  16. Footnote ಯೆಶಾ 1:9, 10; 3:9:
  17. Footnote ಯೆಹೆ. 23:3, 8, 19:27:
  18. Footnote ಕೀರ್ತ 79:2, 3:
  19. Footnote ಪ್ರಕ 11:5, 6; 1 ಅರಸು. 18:17:
  20. Footnote ಯೋಹಾ 16:20; ಪ್ರಕ 3:10:
  21. Footnote ಆದಿ 2:7; ಯೆಹೆ. 37:5, 9, 10, 14:
  22. Footnote ಪ್ರಕ 4:1:
  23. Footnote ಅ. ಕೃ. 1:9; 1 ಥೆಸ. 4:17:
  24. Footnote ಪ್ರಕ 12:5; 2 ಅರಸು. 2:11:
  25. Footnote ಪ್ರಕ 6:12:
  26. Footnote ಪ್ರಕ 16:19:
  27. Footnote 2 ಪೂರ್ವ 36:23; ಯೋನ. 1:9:
  28. Footnote ಯೆಹೋ. 7:19; ಪ್ರಕ 14:7; 16:9, 19:7:
  29. Footnote ಪ್ರಕ 8:13; 9:12:
  30. Footnote ಪ್ರಕ 16:17; 19:1:
  31. Footnote ಪ್ರಕ 12:10:
  32. Footnote ಕೀರ್ತ 2:2; ಲೂಕ 9:20; ಅ. ಕೃ. 4:26:
  33. Footnote ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34:
  34. Footnote ಪ್ರಕ 4:4:
  35. Footnote ಪ್ರಕ 4:10:
  36. Footnote ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8:
  37. Footnote ಕೀರ್ತ 97:1; ಪ್ರಕ 19:6:
  38. Footnote ಕೀರ್ತ 2:5; 110:5:
  39. Footnote ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7:
  40. Footnote ಪ್ರಕ 19:5:
  41. Footnote ಪ್ರಕ 13:10:
  42. Footnote ಪ್ರಕ 15:5:
  43. Footnote ಇಬ್ರಿ. 9:4:
  44. Footnote ಪ್ರಕ 16:21:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.