ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಪ್ರಕ 1
ಪೀಠಿಕೆ
ಯೇಸು ಕ್ರಿಸ್ತನ ಪ್ರಕಟನೆಯು, ಆತನು 1ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟಣೆಯನ್ನು ಹೊಂದಿದನು. ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ 2ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು. ಯೋಹಾನನು 3ದೇವರ ವಾಕ್ಯದ ಕುರಿತಾಗಿಯೂ 4ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ 5ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು. 6ಈ ಪ್ರವಾದನಾ ವಾಕ್ಯಗಳನ್ನು ಓದುವವನೂ, ಕೇಳುವವರೂ ಮತ್ತು ಇದರಲ್ಲಿ ಬರೆದಿರುವುದನ್ನು ಕೈಕೊಂಡು ನಡೆಯುವವರೂ ಧನ್ಯರು. 7ಏಕೆಂದರೆ ಅವು ನೆರವೇರುವ ಕಾಲವು ಸಮೀಪವಾಗಿದೆ.
ಆಸ್ಯಸೀಮೆಯ ಏಳು ಸಭೆಗಳಿಗೆ ವಂದನೆಗಳು
ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ; 8ಇರುವಾತನೂ, 9ಇದ್ದಾತನೂ, ಬರುವಾತನೂ ಆಗಿರುವಾತನಿಂದ 10ಮತ್ತು 11ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು 12ನಂಬಿಗಸ್ತ ಸಾಕ್ಷಿಯೂ, 13ಸತ್ತವರೊಳಗಿಂದ ಮೊದಲು 14ಎದ್ದುಬಂದಾತನೂ ಮತ್ತು 15ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. 16ನಮ್ಮನ್ನು ಪ್ರೀತಿಸುವಾತನೂ 17ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ, ನಮ್ಮನ್ನು ದೇವರ 18ರಾಜ್ಯವನ್ನಾಗಿಯೂ 19ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದಾತನಿಗೆ ಯುಗಯುಗಾಂತರಗಳಲ್ಲಿಯೂ 20ಮಹಿಮೆಯು 21ಬಲವು ಉಂಟಾಗಲಿ. ಆಮೆನ್.
ನೋಡಿರಿ, ಆತನು 22ಮೇಘಗಳೊಂದಿಗೆ ಬರುತ್ತಾನೆ, 23ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್. 24
“ನಾನೇ ಆದಿಯೂ ಅಂತ್ಯವೂ, 25ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.
ಕ್ರಿಸ್ತನ ದರ್ಶನ
ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಹಿಂಸೆಯಲ್ಲಿ, 26ರಾಜ್ಯದಲ್ಲಿ, ತಾಳ್ಮೆಯಲ್ಲಿ, ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು 27ದೇವರ ವಾಕ್ಯಕ್ಕೋಸ್ಕರ ಯೇಸುವಿನ ವಿಷಯವಾಗಿ ಸಾಕ್ಷಿ ನೀಡಲು ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು. ನಾನು 28ಕರ್ತನ ದಿನದಲ್ಲಿ 29ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು 30ತುತ್ತೂರಿಯ ನಾದದಂತಿತ್ತು. ಅದು, 31“ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು.
ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ 32ಏಳು ಚಿನ್ನದ ದೀಪಸ್ತಂಭಗಳನ್ನೂ ಆ ದೀಪಸ್ತಂಭಗಳ ಮಧ್ಯದಲ್ಲಿ 33ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. 34ಆತನು ನಿಲುವಂಗಿಯನ್ನು ಧರಿಸಿ 35ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 36ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. 37ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ, 38ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, 39ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. 40ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, 41ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. 42ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು. ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. 43ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, 44 “ಹೆದರಬೇಡ, 45ನಾನು ಮೊದಲನೆಯವನೂ, ಕಡೆಯವನೂ, ಸದಾ ಜೀವಿಸುವವನೂ ಆಗಿದ್ದೇನೆ. 46ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. 47ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ. ಆದ್ದರಿಂದ 48ನೀನು ಕಂಡವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಆಗಬೇಕಾದವುಗಳನ್ನೂ ಬರೆ. ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಢಾರ್ಥವನ್ನು ವಿವರಿಸುತ್ತೇನೆ. ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ 49ದೂತರು, ಆ ಏಳು ದೀಪಸ್ತಂಭಗಳು ಅಂದರೆ 50ಆ ಏಳು ಸಭೆಗಳು.”
Source notes (50)
- Footnote ಪ್ರಕ 22:6:
- Footnote ಪ್ರಕ 22:16:
- Footnote ಯೋಹಾ 19:35:
- Footnote ಅಥವಾ, ಯೇಸು ಕ್ರಿಸ್ತನ ವಿಷಯವಾದ. ಪ್ರಕ 6:9; 12:17; 19:10:
- Footnote ಪ್ರಕ 1:11, 19:
- Footnote ಪ್ರಕ 22:7; ಲೂಕ 11:28; 1 ಯೋಹಾ 2:3:
- Footnote ಪ್ರಕ 22:10; 1 ಯೋಹಾ 2:18; ರೋಮಾ. 13:11
- Footnote ವಿಮೋ 3:14:
- Footnote ಯೋಹಾ 1:1:
- Footnote ಪ್ರಕ 1:8; 4:8; ಇಬ್ರಿ. 13:8:
- Footnote ಪ್ರಕ 3:1; 4:5; 5:6:
- Footnote ಪ್ರಕ 3:14; ಯೋಹಾ 18:37; 1 ತಿಮೊ. 6:13; ಯೆಶಾ 55:4:
- Footnote ಕೊಲೊ 1:18. ಕೀರ್ತ 89:27; ಅ. ಕೃ. 26:23; 1 ಕೊರಿ 15:20:
- Footnote ಮೂಲ: ಹುಟ್ಟಿಬಂದವನೂ.
- Footnote ಪ್ರಕ 17:14; 19:16; ಕೀರ್ತ 89:27:
- Footnote ಯೋಹಾ 13:34; 15:9; ರೋಮಾ. 8:37:
- Footnote 1 ಪೇತ್ರ. 1:18, 19:
- Footnote ಪ್ರಕ 5:10; 20:6; 1 ಪೇತ್ರ. 2:9; ವಿಮೋ 19:6:
- Footnote ರೋಮಾ. 15:6:
- Footnote ರೋಮಾ. 11:36:
- Footnote 1 ಪೇತ್ರ. 4:11:
- Footnote ದಾನಿ. 7:13; ಮತ್ತಾ 13:41; 16:27; 24:30; 25:31; 26:64; ಯೋಹಾ 1:5 1; ಅ. ಕೃ. 1:16; 1 ಥೆಸ. 4:16; ಯೂದ 4:
- Footnote ಜೆಕ. 12:10; ಯೋಹಾ 19:37:
- Footnote ಯೆಶಾ 41:4; 44:6; 48:12; ಪ್ರಕ 21:6; 22:13:
- Footnote ವ. 4:
- Footnote 2 ತಿಮೊ. 2:12:
- Footnote ವ. 2:
- Footnote ಅ. ಕೃ. 20:7; 1 ಕೊರಿ 16:2:
- Footnote ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:
- Footnote ಪ್ರಕ 4:1:
- Footnote ಪ್ರಕ 1:2, 19:
- Footnote ವ. 20; ಪ್ರಕ 2:1; ವಿಮೋ 25:37; ಜೆಕ. 4:2; ಪ್ರಕ 11:4:
- Footnote ದಾನಿ. 7:13; 10:16; ಪ್ರಕ 14:14:
- Footnote ವಿಮೋ 28:4; ದಾನಿ. 10:5:
- Footnote ಪ್ರಕ 15:6:
- Footnote ದಾನಿ. 7:9:
- Footnote ಪ್ರಕ 2:18; 19:12; ದಾನಿ. 10:6:
- Footnote ಯೆಹೆ. 1:7; ದಾನಿ. 10:6:
- Footnote ಯೆಹೆ. 1:24; 43:2; ಪ್ರಕ 14:2; 19:6:
- Footnote ವ. 20; ಪ್ರಕ 2:1; 3:1:
- Footnote ಪ್ರಕ 19:15; ಯೆಶಾ 49:2; ಎಫೆ 6:17; ಇಬ್ರಿ. 4:12; ಪ್ರಕ 2:12, 16:
- Footnote ಮತ್ತಾ 17:2:
- Footnote ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:
- Footnote ಮತ್ತಾ 17:7:
- Footnote ಯೆಶಾ 41:4; 44:6; 48:12; ಪ್ರಕ 2:8; 22:13:
- Footnote ರೋಮಾ. 6:9; 14:9:
- Footnote ಪ್ರಕ 9:1; 20:1:
- Footnote ಪ್ರಕ 1:2, 11, 12-16
- Footnote ಪ್ರಕ 7:1; 9:11; 14:18; 16:5:
- Footnote ಮತ್ತಾ 5:14, 15:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.