ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಕೀರ್ತ 13
ಶತ್ರುಪೀಡಿತನ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ರಚಿಸಿದ ಕೀರ್ತನೆ.
ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ?
ಇನ್ನೆಲ್ಲಿಯ ತನಕ ನನಗೆ ವಿಮುಖನಾಗಿರುವಿ?
ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿದ್ದು,
ಆಲೋಚಿಸಿಕೊಳ್ಳುತ್ತಾ ಇರಬೇಕು?
ಇನ್ನೆಲ್ಲಿಯ ತನಕ ವಿರೋಧಿಯು ನನಗೆ ದೊರೆಯಾಗಿರಬೇಕು?
ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ನನಗೆ ಸದುತ್ತರವನ್ನು ದಯಪಾಲಿಸು;
ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.
ನನ್ನ ಶತ್ರುವು, “ನಾನು ಅವನನ್ನು ಜಯಿಸಿದೆನು” ಎಂದು ಹೇಳಿಕೊಳ್ಳಬಾರದು;
ವೈರಿಗಳು, “ನನ್ನ ಎದುರಾಳಿಯು ಜಾರಿಬಿದ್ದನು” ಎಂದು ಹಿಗ್ಗಬಾರದು.
ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ;
ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವುದು.
ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.