Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಫಿಲಿಪ್ಪಿ 3

ನಿಜವಾದ ನೀತಿ

ಕಡೆಯದಾಗಿ ನನ್ನ ಸಹೋದರರೇ, 1ಕರ್ತನಲ್ಲಿ ಸಂತೋಷಪಡಿರಿ. 2ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು. 3ಆ ನಾಯಿಗಳಿಗೆ ಎಚ್ಚರವಾಗಿರಿ, 4ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ. ನಿಜವಾದ ಸುನ್ನತಿಯವರು ಯಾರೆಂದರೆ, 5ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, 6ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ 7ನಾವುಗಳೇ. 8ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. 9ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, 10ನಾನು ಇಸ್ರಾಯೇಲ್ ವಂಶದವನು, 11ಬೆನ್ಯಾಮೀನನ ಕುಲದವನು, 12ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ 13ನಾನು ಫರಿಸಾಯನು, 14ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, 15ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ. ಆದರೆ, 16ನನಗೆ ಲಾಭವಾಗಿದ್ದಂಥವುಗಳನ್ನು 17ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, 18ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು 19ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, 20ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, 21ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. 22ಆತನನ್ನೂ 23ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, 24ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. ಹೀಗಾದರೆ 25ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.

ಬಿರುದಿಗಾಗಿ ಓಟ

ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು 26ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು 27ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ 28ಕರೆದು ನಮ್ಮ ಮುಂದೆ ಇಟ್ಟಿರುವ 29ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. ನಮ್ಮಲ್ಲಿ 30ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. ಅಂತೂ, 31ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.

ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ 32ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. ಯಾಕೆಂದರೆ 33ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ 34ಅಳುತ್ತಾ ಹೇಳುತ್ತೇನೆ. 35ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, 36ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, 37ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. 38ನಾವಾದರೋ ಪರಲೋಕದ ಪ್ರಜೆಗಳು, 39ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. ಆತನು 40ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ 41ಪರಾಕ್ರಮವನ್ನು ಹೊಂದಿದವನಾಗಿ 42ದೀನಾವಸ್ಥೆಯುಳ್ಳ ನಮ್ಮ ದೇಹವನ್ನು 43ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

Source notes (43)
  1. Footnote ಫಿಲಿ. 4:4, ಥೆಸ. 5:16
  2. Footnote 2 ಪೇತ್ರ. 1:12
  3. Footnote ಕೀರ್ತ 22:16,20, ಯೆಶಾ 56:10-11, ಪ್ರಕ 22:15, ಗಲಾ. 5:15
  4. Footnote 2 ಕೊರಿ 11:13
  5. Footnote ಯೋಹಾ 4:23, ಯೂದ. 20, ಗಲಾ. 5:25
  6. Footnote ರೋಮಾ. 15:17, ಗಲಾ. 6:14
  7. Footnote ರೋಮಾ. 2:29
  8. Footnote 2 ಕೊರಿ 11:18
  9. Footnote ಆದಿ 17:12
  10. Footnote 2 ಕೊರಿ 11:22
  11. Footnote ರೋಮಾ. 11:1
  12. Footnote 2 ಕೊರಿ 11:22
  13. Footnote ಅ. ಕೃ. 23:6, 26:5
  14. Footnote ಅ. ಕೃ. 8:3, 22:3-4, ಗಲಾ. 1:13-14
  15. Footnote ವ. 9 ನೋಡಿರಿ
  16. Footnote ಲೂಕ 14:33
  17. Footnote ಇಬ್ರಿ. 11:26
  18. Footnote ಯೋಹಾ 17:3, 2 ಪೇತ್ರ. 1:3, ಯೆಶಾ 53:11, ಯೆರೆ 9:23-24
  19. Footnote 2 ಕೊರಿ 5:15
  20. Footnote ರೋಮಾ. 10:5, ವ. 6 ನೋಡಿರಿ
  21. Footnote ರೋಮಾ. 1:17, 3:22, 1 ಕೊರಿ 1:30
  22. Footnote ಎಫೆ 4:13
  23. Footnote ರೋಮಾ. 1:4, 6:4, ಎಫೆ 1:19-20
  24. Footnote 1 ಪೇತ್ರ. 4:13, 2 ಕೊರಿ 1:5
  25. Footnote ಲೂಕ 20:35, 1 ಕೊರಿ 15:23, ಪ್ರಕ 20:5-6, ಇಬ್ರಿ. 11:35
  26. Footnote ಇಬ್ರಿ. 5:9, 11:40, 12:23
  27. Footnote ಲೂಕ 9:62, ಇಬ್ರಿ. 6:1
  28. Footnote ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28
  29. Footnote 1 ಕೊರಿ 9:24, ಕೊಲೊ 2:18
  30. Footnote 1 ಕೊರಿ 2:6
  31. Footnote ಗಲಾ. 6:16
  32. Footnote ಫಿಲಿ. 4:9, 1 ಕೊರಿ 4:16
  33. Footnote 2 ಕೊರಿ 11:13
  34. Footnote ಅ. ಕೃ. 20:31
  35. Footnote 2 ಕೊರಿ 11:15, 2 ಥೆಸ. 1:9
  36. Footnote 2 ಕೊರಿ 11:12, ಗಲಾ. 6:13
  37. Footnote ರೋಮಾ. 8:5, ಕೊಲೊ 3:2
  38. Footnote ಎಫೆ 2:19
  39. Footnote ಅ. ಕೃ. 1:11, 1 ಕೊರಿ 1:7, ಇಬ್ರಿ. 9:28
  40. Footnote 1 ಕೊರಿ 15:28
  41. Footnote ಎಫೆ 1:19
  42. Footnote 1 ಕೊರಿ 15:43-53
  43. Footnote ಫಿಲಿ. 3:10, ಕೊಲೊ 3:4, ರೋಮಾ. 8:29

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.