ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಇಬ್ರಿ 9
ಭೂಲೋಕದ ಮತ್ತು ಪರಲೋಕದ ಆಲಯ
ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ 1ದೇವಾಲಯವಿತ್ತು. 2ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ 3ದೀಪಸ್ತಂಭ, 4ಮೇಜು, ಮತ್ತು 5ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು. ಮತ್ತು 6ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು. ಅದರಲ್ಲಿ ಚಿನ್ನದ 7ಧೂಪಾರತಿಯು ಮತ್ತು 8ಚಿನ್ನದ ತಗಡಿನಿಂದ ಹೊದಿಸಿದ 9ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ 10ಚಿನ್ನದ ಪಾತ್ರೆಯೂ, 11ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು. ಅದರ ಮೇಲೆ 12ಕೃಪಾಸನವನ್ನು ಮುಚ್ಚುವ 13ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು. ಆದರೆ 14ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. 15ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು. ಈ ಗುಡಾರದ ಮೊದಲನೆಯ ಭಾಗವು 16ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ. ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ 17ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ. ಅವು 18ಅನ್ನಪಾನಗಳೂ ಮತ್ತು 19ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
ಕ್ರಿಸ್ತನಾದರೋ 20ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ 21ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, 22ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ, 23ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ 24ಸ್ವಂತ ರಕ್ತದ ಮೂಲಕ 25ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ 26ನಿತ್ಯ ವಿಮೋಚನೆಯನ್ನು ಸಾಧಿಸಿದನು. 27ಹೋತ ಹೋರಿಗಳ ರಕ್ತವೂ 28ಅಶುದ್ಧರಾದವರ ಮೇಲೆ ಚಿಮುಕಿಸುವ 29ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ, ನಿತ್ಯಾತ್ಮನಿಂದ 30ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ 31ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, 32ನಮ್ಮನ್ನು 33ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು 34ಶುದ್ಧೀಕರಿಸುತ್ತದಲ್ಲವೇ? 35
ದೇವರಿಂದ ಕರೆಯಲ್ಪಟ್ಟ ಜನರು, ದೇವರ 36ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು 37ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ 38ಕ್ರಿಸ್ತನು ಮರಣ ಹೊಂದಿದನು. 39ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ. ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.
ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ. 40ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು 41ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ 42ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು. “43ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು. ಇದಲ್ಲದೆ 44ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು. ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. 45ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.
ಯೇಸುವಿನ ಯಜ್ಞ ಪಾಪವನ್ನು ನಿವಾರಿಸುತ್ತದೆ
ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ 46ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ. ಯಾಕೆಂದರೆ ಕ್ರಿಸ್ತನು 47ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ 48ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ 49ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು. ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ. ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ 50ಒಂದೇ ಸಾರಿ, 51ಯುಗಗಳ ಸಮಾಪ್ತಿಯವರೆಗೂ, 52ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು. ಒಂದೇ ಸಾರಿ ಸಾಯುವುದೂ 53ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ, ಹಾಗೆಯೇ ಕ್ರಿಸ್ತನು ಸಹ 54ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು 55ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು 56ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ 57ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.
Source notes (57)
- Footnote ವಿಮೋ 25:8:
- Footnote ವಿಮೋ 26:1:
- Footnote ವಿಮೋ 25:31-39; 26:35; 40. 4:
- Footnote ವಿಮೋ 25:23-29:
- Footnote ವಿಮೋ 25:30; ಯಾಜ 24:5-8:
- Footnote ವಿಮೋ 26:31-33; 40. 3, 21:
- Footnote ಯಜ್ಞವೇದಿ
- Footnote ಯಾಜ 16:12,13. ವಿಮೋ 30:1
- Footnote ವಿಮೋ 25:10; 26:33; 40. 3, 21; ಪ್ರಕ 11:19:
- Footnote ವಿಮೋ 16:33, 34:
- Footnote ಅರಣ್ಯ 17:10:
- Footnote ಯಾಜ 16:2:
- Footnote ವಿಮೋ 25:18-22; 1 ಅರಸು. 8:6, 7:
- Footnote ಯಾಜ 16:15, 34; ಇಬ್ರಿ. 10:3; ವಿಮೋ 30. 10:
- Footnote ಇಬ್ರಿ. 5:3:
- Footnote ಇಬ್ರಿ. 10:20; ಯೋಹಾ 14:6:
- Footnote ಇಬ್ರಿ. 7:19:
- Footnote ಯಾಜ 11:2:
- Footnote ಮಾರ್ಕ 7:4, 8; ಯಾಜ 11:25:
- Footnote ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1:
- Footnote ಮಾರ್ಕ 14:58; ಅ. ಕೃ. 7:48; 17:24:
- Footnote ಇಬ್ರಿ. 8:2; 9:24:
- Footnote ಇಬ್ರಿ. 10:4:
- Footnote ಅ. ಕೃ. 20:28:
- Footnote ಇಬ್ರಿ. 7:27; 10:10:
- Footnote 1 ಕೊರಿ 6:20:
- Footnote ಯಾಜ 16:14-16:
- Footnote ಅರಣ್ಯ 19:2, 17, 18:
- Footnote ಎಳೆ ಕರುವಿನ, ಮಣಕ, ಪಡ್ಡೆ.
- Footnote ಇಬ್ರಿ. 7:27; 8:3:
- Footnote ಇಬ್ರಿ. 9:12; 1 ಯೋಹಾ 1:7; ಪ್ರಕ 7:14:
- Footnote ಕೆಲವು ಪ್ರತಿಗಳಲ್ಲಿ, ನಿಮ್ಮನ್ನು, ನೀವು ಮತ್ತು ನಿಮ್ಮ ಎಂದು ಬರೆದದೆ.
- Footnote ಇಬ್ರಿ. 6:1:
- Footnote ಇಬ್ರಿ. 1:3; 10:22:
- Footnote ಇಬ್ರಿ. 3:1; ರೋಮಾ. 8:28:
- Footnote ಇಬ್ರಿ. 10:36; ವಿಮೋ 32:13:
- Footnote ಇಬ್ರಿ. 8:6; 12:24:
- Footnote ರೋಮಾ. 3:24, 25; 5:6; ಪ್ರಕ 5:9:
- Footnote ಅಥವಾ. ಒಡಂಬಡಿಕೆಯಿರುವಲ್ಲಿ ಅದನ್ನು ನಿಶ್ಚಯಪಡಿಸುವ ಪಶುವಿನ ಮರಣವು ಪ್ರಸಿದ್ಧವಾಗಿರಬೇಕಷ್ಟೆ. ಪಶುವಿನ ಮರಣವಾದ ಮೇಲೆ ಒಡಂಬಡಿಕೆಯು ದೃಢವಾಗುವುದೇ ಹೊರತು ನಿಶ್ಚಯಪಡಿಸುವ ಆ ಪಶು ಜೀವದಿಂದಿರುವಾಗ ಆ ಒಡಂಬಡಿಕೆ ಎಂದಿಗೂ ಪ್ರಯೋಜನಕ್ಕೆ ಬರುವುದಿಲ್ಲ. ಗಲಾ. 3:15:
- Footnote ವಿಮೋ 24:6, 8:
- Footnote ಯಾಜ 14:4, 7; ಅರಣ್ಯ 19:6, 17:
- Footnote ವ. 12:
- Footnote ವಿಮೋ 24:8; ಮತ್ತಾ 26:28:
- Footnote ವಿಮೋ 29:12, 36; ಯಾಜ 8:15, 19; 16:14, 16; 2 ಪೂರ್ವ 29:22:
- Footnote ಯಾಜ 17:11:
- Footnote ಇಬ್ರಿ. 8:5:
- Footnote ಇಬ್ರಿ. 8:2; 9:11:
- Footnote ವ. 7:
- Footnote ಇಬ್ರಿ. 7:25; ರೋಮಾ. 8:34:
- Footnote ಇಬ್ರಿ. 7:27; 9:12; 10:10; 1 ಪೇತ್ರ 3:18:
- Footnote ಇಬ್ರಿ. 1:2; 1 ಕೊರಿ 10:11:
- Footnote ಯೋಹಾ 1:29; 1 ಯೋಹಾ 3:5:
- Footnote ಮತ್ತಾ 16:27; 2 ಕೊರಿ 5:10:
- Footnote ಯೆಶಾ 53:12; 1 ಪೇತ್ರ. 2:24; 3:18; ಮತ್ತಾ 20:28; 26:28; ಮಾರ್ಕ 10:45; ಪ್ರಕ 5:9:
- Footnote ಅ. ಕೃ. 1:11:
- Footnote ಇಬ್ರಿ. 4:15:
- Footnote ತೀತ. 2:13:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.