Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಇಬ್ರಿ 13

ದೇವರನ್ನು ಮೆಚ್ಚಿಸುವುದು ಹೇಗೆ

1

ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ. ಅತಿಥಿ 2ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ 3ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು 4ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, 5ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ಎಲ್ಲರೂ 6ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು 7ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ 8ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ. 9ಹಣದಾಸೆಯಿಂದ ದೂರವಿರಿ. 10ನಿಮಗಿರುವವುಗಳಲ್ಲಿ ತೃಪ್ತರಾಗಿರಿ. 11“ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ತಾನೇ ಹೇಳಿದ್ದಾನೆ. ಆದ್ದರಿಂದ, 12“ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ, 13ಮನುಷ್ಯನು ನನಗೆ ಏನು ಮಾಡಿಯಾನು?” ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು. ನಿಮಗೆ ದೇವರ ವಾಕ್ಯವನ್ನು ಬೋಧಿಸಿದ 14ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು 15ಅವರ ನಂಬಿಕೆಯನ್ನು ಅನುಸರಿಸಿರಿ. 16

ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. 17ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. 18ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.

ನಮಗೊಂದು ಯಜ್ಞವೇದಿ ಉಂಟು 19ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ. ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ 20ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ. ಅದರಂತೆ ಯೇಸು ಕೂಡ 21ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ 22ಪಟ್ಟಣದ ಹೊರಗೆ ಸತ್ತನು. ಆದ್ದರಿಂದ ನಾವು 23ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. ಏಕೆಂದರೆ 24ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ. ಆದ್ದರಿಂದ 25ಯೇಸುವಿನ ಮೂಲಕವಾಗಿಯೇ ದೇವರಿಗೆ 26ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, 27ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. ಇದಲ್ಲದೆ ಪರೋಪಕಾರ ಮಾಡುವುದನ್ನು, 28ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. 29ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು. 30

ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು 31ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು 32ಕಾಯುವವರಾಗಿದ್ದಾರೆ. 33ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.

ಕಡೆ ಮಾತುಗಳು

34

ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸ್ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ. ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ 35ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ. 36ನಿತ್ಯವಾದ 37ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, 38ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು 39ಸತ್ತವರೊಳಗಿಂದ ಬರಮಾಡಿದ, 40ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು 41ನಮ್ಮಲ್ಲಿ ನೆರವೇರಿಸಲಿ. 42ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.

ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 43ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. 44

ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.

ನಿಮ್ಮ 45ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ. 46

ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

Source notes (46)
  1. Footnote ರೋಮಾ. 12:10; 1 ಥೆಸ. 4:9; 1 ಪೇತ್ರ. 2:17:
  2. Footnote ಮತ್ತಾ 25:35; 1 ಪೇತ್ರ. 4:9:
  3. Footnote ಆದಿ 18:3; 19:2:
  4. Footnote ಮೂಲ: ನೀವೂ ದೇಹದಲ್ಲಿದ್ದೀರೆಂದು.
  5. Footnote ಇಬ್ರಿ. 10:34; ಮತ್ತಾ 25:36:
  6. Footnote 1 ಕೊರಿ 7:38; 1 ತಿಮೊ. 4:3:
  7. Footnote ಮೂಲ: ಹಾಸಿಗೆಯು.
  8. Footnote 1 ಕೊರಿ 6:9:
  9. Footnote 1 ತಿಮೊ. 3:3:
  10. Footnote 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:
  11. Footnote ಯೆಹೋ. 1:5; ಧರ್ಮೋ 31:6,8:
  12. Footnote ಕೀರ್ತ 118:6; 27:1:
  13. Footnote ಕೀರ್ತ 56:4,11:
  14. Footnote ಇಬ್ರಿ. 13:17,24:
  15. Footnote ಇಬ್ರಿ. 6:12:
  16. Footnote ಇಬ್ರಿ. 1:12; ಯೋಹಾ 8:58; ಪ್ರಕ 1:4,8;
  17. Footnote ಎಫೆ 4:14:
  18. Footnote ಕೊಲೊ 2:16:
  19. Footnote 1 ಕೊರಿ 9:13; 10:18:
  20. Footnote ವಿಮೋ 29:14; ಯಾಜ 16:27:
  21. Footnote ಇಬ್ರಿ. 9:12:
  22. Footnote ಮತ್ತಾ 21:39; ಯೋಹಾ 19:17,20; ಅ. ಕೃ. 7:58:
  23. Footnote ಇಬ್ರಿ. 11:26; 1 ಪೇತ್ರ. 4:14:
  24. Footnote ಇಬ್ರಿ. 11:10,16; ಎಫೆ 2:19; ಫಿಲಿ. 3:20:
  25. Footnote ಎಫೆ 5:20:
  26. Footnote ಯಾಜ 7:12; ಕೀರ್ತ 107:22; 116:17:
  27. Footnote ಯೆಶಾ 57:19; ಹೋಶೇ. 14:2; ಕೀರ್ತ 119:108:
  28. Footnote ರೋಮಾ. 12:13:
  29. Footnote ಮೀಕ. 6:7,8; ಫಿಲಿ. 4:18:
  30. Footnote ಇಬ್ರಿ. 13:7, 24:
  31. Footnote ಯೆರೆ 13:20; ಯೆಹೆ. 34:10:
  32. Footnote ಯೆಹೆ. 3:17:
  33. Footnote ಅ. ಕೃ. 20:24,31:
  34. Footnote 1 ಥೆಸ. 5:25; 2 ಥೆಸ. 3:1:
  35. Footnote ಫಿಲೆ. 22:
  36. Footnote ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ.
  37. Footnote ಜೆಕ. 9:11; ಇಬ್ರಿ. 10:29:
  38. Footnote ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11:
  39. Footnote ಅ. ಕೃ. 2:24:
  40. Footnote ರೋಮಾ. 15:33:
  41. Footnote ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ.
  42. Footnote ರೋಮಾ. 11:36:
  43. Footnote 1 ಪೇತ್ರ. 3:12:
  44. Footnote 1 ಥೆಸ. 3:2:
  45. Footnote ಇಬ್ರಿ. 13:7,17:
  46. Footnote ಕೊಲೊ 4:18:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.