ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
1 ಥೆಸ 4
ದೇವರಿಗೆ ಮೆಚ್ಚಿಕೆಯಾದ ಜೀವನ
ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ 1ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ. ಅದುದರಿಂದ 2ನೀವು ಹೇಗೆ ನಡೆದು 3ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು 4ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. 5ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. 6ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು. 7ದೇವರನ್ನರಿಯದ 8ಅನ್ಯಜನರಂತೆ 9ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ 10ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. ಈ ವಿಷಯದಲ್ಲಿ 11ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ 12ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ. ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ 13ಶುದ್ಧರಾಗಿರುವುದಕ್ಕೆ ಕರೆದನು. ಹೀಗಿರಲು 14ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ 15ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ. 16
ಸಹೋದರ ಸ್ನೇಹದ ವಿಷಯದಲ್ಲಿ 17ನಿಮಗೆ ಬರೆಯುವ ಅವಶ್ಯಕತೆಯಿಲ್ಲ, 18ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ. 19ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, 20ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ. ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು 21ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ 22ಸುಮ್ಮಗಿದ್ದು, 23ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, 24ಕೈಯಾರೆ ಕೆಲಸಮಾಡಿ ದುಡಿಯಿರಿ. ಹೀಗಿದ್ದರೆ ನೀವು 25ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.
ಯೇಸು ಕರ್ತನು ಪುನರಾಗಮನ
ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, 26ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ 27ದುಃಖಿಸಬಾರದು ಎಂಬುದೇ ನಮ್ಮ ಬಯಕೆ. 28ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ 29ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ 30ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, 31ಕರ್ತನು ಪುನರಾಗಮಿಸುವವರೆಗೆ 32ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ. ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, 33ಪ್ರಧಾನದೂತನ ಶಬ್ದದೊಡನೆಯೂ, 34ದೇವರ ತುತ್ತೂರಿ ಧ್ವನಿಯೊಡನೆಯೂ 35ಆಕಾಶದಿಂದ ಇಳಿದುಬರುವನು. 36ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು. ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ 37ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ 38ಕರ್ತನ ಜೊತೆಯಲ್ಲಿರುವೆವು. ಆದಕಾರಣ ಈ ಮಾತುಗಳಿಂದ 39ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.
Source notes (39)
- Footnote 1 ಕೊರಿ 11:2:
- Footnote ಎಫೆ 4:1:
- Footnote ಕೊಲೊ 1:10:
- Footnote ಫಿಲಿ. 4:9:
- Footnote ರೋಮಾ. 6:19, 22; 1 ಕೊರಿ 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:
- Footnote 1 ಕೊರಿ 6:18:
- Footnote ಕೀರ್ತ 79:6; ಗಲಾ. 4:8:
- Footnote ಎಫೆ 4:17:
- Footnote ರೋಮಾ. 1:26:
- Footnote ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು.
- Footnote 1 ಕೊರಿ 6:8:
- Footnote ರೋಮಾ. 13:4; 12:19:
- Footnote 1 ಥೆಸ. 4:3; 1 ಪೇತ್ರ. 1:15:
- Footnote ಲೂಕ 10:16:
- Footnote 1 ಯೋಹಾ 3:24; 4:13:
- Footnote ಇಬ್ರಿ. 13:1
- Footnote 1 ಥೆಸ. 5:1:
- Footnote ಯೋಹಾ 13:34:
- Footnote 1 ಥೆಸ. 1:7:
- Footnote 1 ಥೆಸ. 3:12:
- Footnote 2 ಥೆಸ. 3:11; 1 ಪೇತ್ರ. 4:15:
- Footnote ಜ್ಞಾ. 17:14:
- Footnote 2 ಥೆಸ. 3:12:
- Footnote ಅ. ಕೃ. 18:3; ಎಫೆ 4:28:
- Footnote ಮಾರ್ಕ 4:11; 1 ಕೊರಿ 5:12, 13; ಕೊಲೊ 4:5; 1 ತಿಮೊ. 3:7:
- Footnote ಎಫೆ 2:12:
- Footnote ಯಾಜ 19:28; ಧರ್ಮೋ 14:1; 2 ಸಮು 12:20-23; ಮಾರ್ಕ 5:39:
- Footnote 1 ಕೊರಿ 15:13; 2 ಕೊರಿ 4:14; ಪ್ರಕ 1:18:
- Footnote ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ.
- Footnote 1 ಕೊರಿ 15:18:
- Footnote 1 ಥೆಸ. 2:19:
- Footnote 1 ಕೊರಿ 15:51:
- Footnote ಯೂದ. 9:
- Footnote ಮತ್ತಾ 24:31; 1 ಕೊರಿ 15:52:
- Footnote ಮತ್ತಾ 16:27; 2 ಥೆಸ. 1:7:
- Footnote 1 ಕೊರಿ 15:23; 2 ಥೆಸ. 2:1; ಪ್ರಕ 14:13:
- Footnote ದಾನಿ. 7:13; ಅ. ಕೃ. 1:9:
- Footnote ಯೋಹಾ 12:26:
- Footnote 1 ಥೆಸ. 5:11:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.