Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಪೇತ್ರ 2

ಪವಿತ್ರ ಜನಾಂಗ ಮತ್ತು ಸಜೀವ ಕಲ್ಲು

ಆದಕಾರಣ 1ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ. 2ಹೊಸದಾಗಿ ಹುಟ್ಟಿದ ಶಿಶುಗಳಂತೆ 3ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ. 4 ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ. ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. 5ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ. 6ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು 7ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ 8ಸಮರ್ಪಕವಾದ 9ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ 10ಪವಿತ್ರ ಯಾಜಕ ವರ್ಗದವರಾಗಿದ್ದೀರಿ. 11

“ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ.

ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ. 12

ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ”

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ, 13

“ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ

ಮುಖ್ಯವಾದ ಮೂಲೆಗಲ್ಲಾಯಿತು” 14

ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ,

“ಅದು ಜನರು ಎಡವುವ ಕಲ್ಲು

ಮುಗ್ಗರಿಸುವ ಬಂಡೆ.”

ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. 15ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ. 16

ನಿಮ್ಮನ್ನು ಕತ್ತಲೆಯೊಳಗಿನಿಂದ 17ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ 18 ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, 19ರಾಜವಂಶಸ್ಥರಾದ 20ಯಾಜಕರೂ, 21ಪರಿಶುದ್ಧ ಜನಾಂಗವೂ, 22ದೇವರ ಸ್ವಕೀಯ ಜನರೂ ಆಗಿದ್ದೀರಿ. 23ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.

ದೇವರ ದಾಸರು

ಪ್ರಿಯರೇ, 24ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು 25ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ 26ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 27ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ 28ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು 29ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು. 30ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ ಅಥವಾ ಅರಸನಿಂದ 31ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ. ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು 32ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ. 33ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ 34ನೀವು ದೇವರ ದಾಸರಂತೆ ನಡೆದುಕೊಳ್ಳಿರಿ. 35ಎಲ್ಲರನ್ನೂ ಸನ್ಮಾನಿಸಿರಿ. 36ಸಹೋದರರನ್ನು ಪ್ರೀತಿಸಿರಿ. 37ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.

ಕ್ರಿಸ್ತನ ಶ್ರಮೆಗಳ ಆದರ್ಶ

38

ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ. 39ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? 40ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. 41ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ 42ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 43ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 44ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, 45ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 46ನಾವು ಪಾಪದ ಪಾಲಿಗೆ ಸತ್ತು 47ನೀತಿವಂತರಾಗಿ ಜೀವಿಸುವಂತೆ 48ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. 49ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 50ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು 51ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

Source notes (51)
  1. Footnote ಎಫೆ 4:22, 25, 31; ಕೊಲೊ 3:8; ಯಾಕೋಬ 1:21:
  2. Footnote ಮತ್ತಾ 18:3; 19:14; ಮಾರ್ಕ 10:15; ಲೂಕ 18:17; 1 ಕೊರಿ 14:20:
  3. Footnote 1 ಕೊರಿ 3:2; ಇಬ್ರಿ. 5:12, 13
  4. Footnote ಕೀರ್ತ 34:8:
  5. Footnote ವ. 7:
  6. Footnote ಎಫೆ 2:20-22; 1 ಕೊರಿ 3:9:
  7. Footnote ಇಬ್ರಿ. 3:4, 6:
  8. Footnote ರೋಮಾ. 15:16; ಫಿಲಿ. 4:18:
  9. Footnote ಯೆಶಾ 56:7; ಮಲಾ. 1:11; ರೋಮಾ. 12:1; ಇಬ್ರಿ. 13:15
  10. Footnote ವ. 9:
  11. Footnote ಯೆಶಾ 28:16:
  12. Footnote ರೋಮಾ. 9:33; 10:11
  13. Footnote ಕೀರ್ತ 118:22; ಅ. ಕೃ. 4:11:
  14. Footnote ಯೆಶಾ 8:14; ರೋಮಾ. 9:33:
  15. Footnote ರೋಮಾ. 9:22; ಯೂದ. 4:
  16. Footnote ಯೆಶಾ 42:16; ಅ. ಕೃ. 26:18:
  17. Footnote ಕೀರ್ತ 36:9:
  18. Footnote ಧರ್ಮೋ 10:15:
  19. Footnote ವಿಮೋ 19:6; ಪ್ರಕ 1:6; 5:10:
  20. Footnote ಯೆಶಾ 61:6; 66:21:
  21. Footnote ಧರ್ಮೋ 7:6:
  22. Footnote ವಿಮೋ 19:5, 6; ಯೆಶಾ 43:21; ಮಲಾ. 3:17; ತೀತ. 2:14:
  23. Footnote ಹೋಶೇ. 1:6, 9, 10; 2:23; ರೋಮಾ. 9:25:
  24. Footnote ಯಾಜ 25:23:
  25. Footnote ಯಾಕೋಬ 4:1:
  26. Footnote ರೋಮಾ. 13:14; ಗಲಾ. 5:24:
  27. Footnote 1 ಪೇತ್ರ. 3:16; ಫಿಲಿ. 2:15; ತೀತ. 2:8:
  28. Footnote ಮತ್ತಾ 5:16; 2 ಕೊರಿ 9:13; ಗಲಾ. 1:24:
  29. Footnote ಅಥವಾ, ದೇವರ ದರ್ಶನಕೊಡುವ ದಿನದಲ್ಲಿ.
  30. Footnote ರೋಮಾ. 13:1; ತೀತ. 3:1:
  31. Footnote ರೋಮಾ. 13:3, 4:
  32. Footnote ವ. 12:
  33. Footnote ಯಾಕೋಬ 1:25:
  34. Footnote 1 ಕೊರಿ 7:22; ರೋಮಾ. 6:22:
  35. Footnote ರೋಮಾ. 12:10; 13:7:
  36. Footnote ಇಬ್ರಿ. 13:1:
  37. Footnote ಜ್ಞಾ. 24:21:
  38. Footnote ಎಫೆ 6:5; ಕೊಲೊ 3:22; 1 ತಿಮೊ. 6:1; ತೀತ. 2:9:
  39. Footnote 1 ಪೇತ್ರ. 3:14, 17; 4:16:
  40. Footnote 1 ಪೇತ್ರ. 3:17, 18; 4:13, 16:
  41. Footnote 1 ಪೇತ್ರ. 3:9; ಅ. ಕೃ. 14:22:
  42. Footnote ಮತ್ತಾ 11:29; ಯೋಹಾ 13:15; ಫಿಲಿ. 2:5:
  43. Footnote ಯೆಶಾ 53:9; ಯೋಹಾ 8:46; 2 ಕೊರಿ 5:21; ಇಬ್ರಿ. 4:15; 1 ಯೋಹಾ 3:5:
  44. Footnote 1 ಪೇತ್ರ. 3:9; ಯೆಶಾ 53:7; ಇಬ್ರಿ. 12:3:
  45. Footnote ಲೂಕ 23:46:
  46. Footnote ರೋಮಾ. 6:2, 11; 7:4, 6; ಕೊಲೊ 2:20; 3:3:
  47. Footnote ರೋಮಾ. 6:13:
  48. Footnote ಯೆಶಾ 53:4, 11 ಮತ್ತಾ 8:17; ಇಬ್ರಿ. 9:28:
  49. Footnote ಯೆಶಾ 53:5:
  50. Footnote ಯೆಶಾ 53:6; ಕೀರ್ತ 119:176; ಯೆಹೆ. 34:6; ಮತ್ತಾ 9:36; ಲೂಕ 15:4:
  51. Footnote ಯೋಹಾ 10:11:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.