Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೋಹಾ 1

ಸಜೀವ ವಾಕ್ಯ

ನಾವು ನಿಮಗೆ ಪ್ರಚುರಪಡಿಸುವ ಜೀವವಾಕ್ಯವು 1ಆದಿಯಿಂದ ಇದ್ದದ್ದು. ನಾವು ಅದನ್ನು 2ಕಿವಿಯಾರೆ ಕೇಳಿ, 3ಕಣ್ಣಾರೆ ಕಂಡು, 4ಮನಸ್ಸಿಟ್ಟು ಗ್ರಹಿಸಿ 5ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು. 6ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು 7ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ. 8ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ. 9ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ. 10ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ.

ದೇವರಲ್ಲಿ ಕತ್ತಲೆಯಿಲ್ಲದ ಕಾರಣ ನಾವು ಪಾಪವನ್ನು ಮರೆಮಾಡದೆ ಅದನ್ನು ಒಪ್ಪಿಕೊಂಡು ಪಾಪಪರಿಹಾರವನ್ನು ಪಡೆಯಬೇಕು

ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; 11ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ. 12ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ, 13ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ. ಆದರೆ 14ಆತನು ಬೆಳಕಿನಲ್ಲಿರುವಂತೆಯೇ 15ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ. 16ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ. 17ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಂಡ ಹಾಗಾಯಿತು ಮತ್ತು 18ಸತ್ಯವೆಂಬುದು ನಮ್ಮಲ್ಲಿಲ್ಲವೆಂದು ತಿಳಿಯುತ್ತದೆ. ನಾವು 19ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ 20ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ 21ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು. ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ 22ಆತನನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ ಮತ್ತು 23ಆತನ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದಿಲ್ಲ.

Source notes (23)
  1. Footnote ಆದಿ 1:1; ಯೋಹಾ 1:1; ಕೊಲೊ 1:17; ಪ್ರಕ 1:4, 8, 17; 3:14; 21:6; 22:13; 1 ಯೋಹಾ 2:13, 14:
  2. Footnote ಅ. ಕೃ. 4:20:
  3. Footnote ಯೋಹಾ 19:35:
  4. Footnote 1 ಯೋಹಾ 4:14; ಯೋಹಾ 1:14; 2 ಪೇತ್ರ. 1:16:
  5. Footnote ಲೂಕ 24:39; ಯೋಹಾ 20:27:
  6. Footnote ಯೋಹಾ 1:4; 11:25; 14:6:
  7. Footnote 1 ಯೋಹಾ 3:5, 8; ರೋಮಾ. 16:26:
  8. Footnote ಯೋಹಾ 15:27; 19:35; 21:24; ಅ. ಕೃ. 1:8; 2:32; 3:15; 1 ಯೋಹಾ 4:14:
  9. Footnote ಯೋಹಾ 17:21; 1 ಕೊರಿ 1:9. 1 ಯೋಹಾ 2:24.
  10. Footnote 2 ಯೋಹಾ 12; ಯೋಹಾ 15:11; 16:24:
  11. Footnote ಯಾಕೋಬ 1:17; ಯೋಹಾ 4:24; 1 ಯೋಹಾ 4:8:
  12. Footnote 1 ಯೋಹಾ 2:11; ಯೋಹಾ 12:35; 2 ಕೊರಿ 6:14:
  13. Footnote ಯೋಹಾ 3:21:
  14. Footnote ಕೀರ್ತ 104:2; 1 ತಿಮೊ. 6:16:
  15. Footnote ಯೆಶಾ 2:5:
  16. Footnote ಎಫೆ 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ 5:9; 7:14; 12:11:
  17. Footnote ಯೋಬ. 15:14; ಯೆರೆ 2:35; ಯಾಕೋಬ. 3:2:
  18. Footnote 1 ಯೋಹಾ 2:4:
  19. Footnote ಕೀರ್ತ 32:5; 51:3; ಜ್ಞಾ. 28:13:
  20. Footnote ಕೀರ್ತ 143:1; ರೋಮಾ. 3:26:
  21. Footnote ಎಫೆ 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ 5:9; 7:14; 12:11:
  22. Footnote 1 ಯೋಹಾ 5:10:
  23. Footnote ಯೋಹಾ 5:38; 8:37:

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.