ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
1 ಕೊರಿ 8
ವಿಗ್ರಹಕ್ಕೆ ಅರ್ಪಿಸಿದ ಆಹಾರವನ್ನು ಕುರಿತು ಬೋಧನೆ
ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. “ನಮ್ಮೆಲ್ಲರಿಗೆ ಜ್ಞಾನವುಂಟೆಂದು” ನಾವು ಬಲ್ಲೆವು. ತಿಳಿವಳಿಕೆಯು ಉಬ್ಬಿಸುತ್ತದೆ, ಆದರೆ 2ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ. ಒಬ್ಬನು ತಾನು 3ಏನಾದರೂ ತಿಳಿದುಕೊಂಡಿದ್ದೇನೆಂದು ಭಾವಿಸುವುದಾದರೆ 4ಅವನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿದುಕೊಂಡಿರುವುದಿಲ್ಲ. ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ದೇವರು ಅವನನ್ನು ತಿಳಿದುಕೊಂಡಿದ್ದಾನೆ. ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, 5“ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು” ನಮಗೆ ತಿಳಿದಿದೆ ಮತ್ತು 6“ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ” ಬಲ್ಲೆವು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, “ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು” ಬಹಳವಿದ್ದರೂ, 7“ನಮಗಾದರೋ ಒಬ್ಬನೇ ತಂದೆಯಾದ ದೇವರು; 8ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, 9ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. 10ನಾವೂ ಆತನ ಮುಖಾಂತರ ಉಂಟಾದೆವು.” ಆದಾಗ್ಯೂ, ಈ ತಿಳಿವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, 11ಕೆಲವರು ಈ ವರೆಗೂ ವಿಗ್ರಹಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸ್ಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ. ಆದರೆ ನಾವು ತಿನ್ನುವ 12ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ. 13ಆದರೆ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲಹೀನನಾದವನಿಗೆ ಅಡ್ಡಿಯಾಗದಂತೆ ಎಚ್ಚರವಾಗಿರಿ. ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ. ಹೀಗೆ ಈ ನಿನ್ನ ಜ್ಞಾನದಿಂದ 14ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ. ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ 15ಅವರ ದುರ್ಬಲವಾದ ಮನಸ್ಸಾಕ್ಷಿಯನ್ನು ನೋಯಿಸಿದರೆ ನೀವು 16ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ. 17ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ.
Source notes (17)
- Footnote 1 ಕೊರಿ 8:4,7,10
- Footnote 1 ಕೊರಿ 13:4-13
- Footnote ಗಲಾ. 6:3; 1 ಕೊರಿ 3:18
- Footnote 1 ಕೊರಿ 13:8-12
- Footnote 1 ಕೊರಿ 10:19; ಯೆಶಾ 41:24
- Footnote 1 ಕೊರಿ 8:6; ಧರ್ಮೋ 4:35,39; 6:4
- Footnote 1 ಕೊರಿ 8:4; ಎಫೆ 4:6
- Footnote ರೋಮಾ. 11:36
- Footnote ಎಫೆ 4:5
- Footnote ಯೋಹಾ 1:3
- Footnote ರೋಮಾ. 14:14,22,23
- Footnote ರೋಮಾ. 14:17
- Footnote 1 ಕೊರಿ 10:23; ರೋಮಾ. 14:21; ಗಲಾ. 5:13
- Footnote ರೋಮಾ. 14:15,20
- Footnote ಮತ್ತಾ 18:6
- Footnote ಮತ್ತಾ 25:45
- Footnote ರೋಮಾ. 4:13,21
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.