Biblica® Open Kannada Contemporary Version 2022
ಕೀರ್ತನೆಗಳು 128
ಯಾತ್ರಾ ಗೀತೆ.
ಯೆಹೋವ ದೇವರಿಗೆ ಭಯಪಟ್ಟು ಅವರ ಮಾರ್ಗಗಳಲ್ಲಿ
ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.
ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ
ಆಶೀರ್ವಾದವನ್ನೂ ಅಭಿವೃದ್ಧಿಯನ್ನೂ ಹೊಂದುವಿ.
ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ
ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು.
ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು,
ಓಲಿವ್ ಮರಗಳ ಸಸಿಗಳ ಹಾಗೆ ಇರುವರು.
ಯೆಹೋವ ದೇವರಿಗೆ ಭಯಪಡುವ ಮನುಷ್ಯನು
ಹೀಗೆಯೇ ಆಶೀರ್ವಾದ ಹೊಂದುವನು.
ಯೆಹೋವ ದೇವರು ನಿನ್ನನ್ನು ಚೀಯೋನಿನೊಳಗಿಂದ
ನಿನ್ನ ಜೀವಮಾನವೆಲ್ಲಾ ಆಶೀರ್ವದಿಸಲಿ;
ನೀನು ಯೆರೂಸಲೇಮಿನ ಸಮೃದ್ಧಿಯನ್ನು ಕಾಣುವಿ.
ನೀನು ಮಕ್ಕಳ ಮಕ್ಕಳನ್ನು ಕಾಣುವ ಬದುಕು ನಿನಗಿರಲಿ
ಇಸ್ರಾಯೇಲರ ಮೇಲೆ ಸಮಾಧಾನವಿರಲಿ.
Biblica® Open Kannada Contemporary Version 2022. Copyright © Biblica, Inc. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-11-09.