Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 46:10

Verse 10 is marked below, with the whole chapter around it. Read from the start

ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರ ಸಂಯೋಜನೆ. ಅಲಾಮೊತ್ ರಾಗವನ್ನು ಆಧಾರಿಸಿದ ಒಂದು ಗೀತೆ.

ದೇವರು ನಮ್ಮ ಆಶ್ರಯವೂ ಬಲವೂ ಆಗಿದ್ದಾರೆ;

ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕರಾಗಿದ್ದಾರೆ.

ಆದ್ದರಿಂದ ಭೂಮಿಯು ಕಂಪಿಸಿದರೂ

ಬೆಟ್ಟಗಳು ಸಮುದ್ರದಲ್ಲಿ ಮುಳುಗಿದರೂ,

ಅದರ ಸಮುದ್ರವು ಘೋಷಿಸಿ ನೊರೆಕಾರಿದರೂ,

ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು.

ಒಂದು ನದಿ ಇದೆ; ಅದರ ಕಾಲುವೆಗಳು ದೇವರು ವಾಸಿಸುವ

ಮಹೋನ್ನತ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ.

ದೇವರು ಅದರ ಮಧ್ಯದಲ್ಲಿ ಇದ್ದಾರೆ, ಅದು ಕದಲದು;

ದೇವರು ಉದಯಕಾಲದಲ್ಲಿ ಅದಕ್ಕೆ ಸಹಾಯ ಮಾಡುವರು.

ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ.

ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.

ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ.

ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.

ಬನ್ನಿರಿ, ಯೆಹೋವ ದೇವರ ಕಾರ್ಯಗಳನ್ನು ನೋಡಿರಿ.

ಅವರು ಭೂಮಿಯಲ್ಲಿ ಎಂಥಾ ಅತಿಶಯಗಳನ್ನು ಉಂಟುಮಾಡಿದ್ದಾರೆ.

ದೇವರು ಯುದ್ಧಗಳನ್ನು ಭೂಮಿಯ

ಅಂತ್ಯದವರೆಗೆ ನಿಲ್ಲಿಸುತ್ತಾರೆ.

ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ.

ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.

“ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ;

ಜನಾಂಗಗಳಲ್ಲಿ ಉನ್ನತನಾಗಿರುವೆನು;

ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ;

ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.